×
Ad

ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು: ಡಾ.ನಿರ್ಮಲಾನಂದನಾಥ ಸ್ವಾಮಿ

Update: 2019-11-09 22:59 IST

ಬೆಂಗಳೂರು, ನ.9: ಅಯೋಧ್ಯೆಯು ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಭೂಮಿ ಎಂಬುದು ಹಿಂದೂಗಳ ನಂಬಿಕೆ. ಇಂದು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಇದನ್ನು ಗಟ್ಟಿಗೊಳಿಸಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿ ತಿಳಿಸಿದ್ದಾರೆ.

ಶ್ರೀರಾಮ ಜನ್ಮಭೂಮಿಯ ವಿವಾದ ಇಂದು ನಿನ್ನೆಯದಲ್ಲ, ಶತಮಾನಗಳ ಕಾಲ ಈ ಬಗ್ಗೆ ಇದ್ದ ವಿವಾದ ಈಗ ಬಗೆಹರಿದಿರುವುದು ಸಂತೋಷದ ವಿಷಯ. ಇದನ್ನು ಯಾರೊಬ್ಬರೂ ತಮ್ಮ ಪರವಾಗಿ ಬಂದ ತೀರ್ಪು ಅಥವಾ ಮತ್ತೊಬ್ಬರ ವಿರುದ್ಧದ ಸೋಲು ಎಂದು ಭಾವಿಸುವುದು ಬೇಡ. ದೇಶದ ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಿ ಶಾಂತಿ ಸೌಹಾರ್ದತೆಯಿಂದ ಬಾಳಬೇಕಿದೆ ಎಂದು ಅವರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News