2020ರ ಐಪಿಎಲ್: ನೂತನ ಮೂರು ನಗರಗಳ ಸೇರ್ಪಡೆ?

Update: 2019-11-09 18:43 GMT

ಹೊಸದಿಲ್ಲಿ, ನ.9: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(ಐಪಿಎಲ್)ಹೊಸ ತಂಡಗಳ ಸೇರ್ಪಡೆಗೆ 2021ರ ಋತುವಿನ ತನಕ ಕಾಯಬೇಕಾಗಬಹುದು. ಆದರೆ, 2020ರ ಆವೃತ್ತಿಯ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ನೂತನ ನಗರಗಳ ಸೇರ್ಪಡೆಯಾಗುವ ಸಾಧ್ಯತೆಯಿದೆ.

8 ಫ್ರಾಂಚೈಸಿಗಳ ಮಾಲಕರು ಮಂಗಳವಾರ ಮುಂಬೈನಲ್ಲಿ ನೂತನ ಬಿಸಿಸಿಐ ಪದಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಐಪಿಎಲ್‌ಗೆ ಸೇರ್ಪಡೆಯಾಗಲಿರುವ ಮೂರು ನಗರಗಳೆಂದರೆ: ಲಕ್ನೊ, ಗುವಾಹಟಿ ಹಾಗೂ ತಿರುವನಂತಪುರ.

 ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಲಕ್ನೊವನ್ನು ತನ್ನ ಎರಡನೇ ತವರು ಮೈದಾನವನ್ನಾಗಿ ಆಯ್ಕೆ ಮಾಡಲು ಬಯಸಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ಅಹ್ಮದಾಬಾದ್‌ನಿಂದ ಗುವಾಹಟಿಗೆ ಸ್ಥಳಾಂತರವಾಗಲು ಬಯಸಿದೆ. ತಿರುವನಂತಪುರದ ತವರು ತಂಡವನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಕೇರಳದ ರಾಜಧಾನಿಯ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಪರಿಶೀಲಿಸಲಾಗುತ್ತಿದೆ. ಕೇರಳದಲ್ಲಿ ಕ್ರಿಕೆಟ್ ಕುರಿತು ಭಾರೀ ಕ್ರೇಜ್ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News