ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ: ಹರ್ಯಾಣ ಮೂಲದ ಅಂತರ್‌ರಾಷ್ಟ್ರೀಯ ಬುಕ್ಕಿಯ ಬಂಧನ

Update: 2019-11-10 07:47 GMT

ಹೊಸದಿಲ್ಲಿ, ನ.10: ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಪ್ರಮುಖ ಪ್ರಗತಿ ಸಾಧಿಸಿರುವ ಸೆಂಟ್ರಲ್ ಕ್ರೈಮ್ ಬ್ರಾಂಚ್(ಸಿಸಿಬಿ)ಅಂತರ್‌ರಾಷ್ಟ್ರೀಯ ಬುಕ್ಕಿ ಸಯ್ಯಮ್‌ರನ್ನು ಬಂಧಿಸಿದೆ.

ಸೆಲೆಬ್ರಿಟಿ ಡ್ರಮ್ಮರ್ ಭಾವೇಶ್ ಬಫ್ನಾ ಅವರ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅಂತರ್‌ರಾಷ್ಟ್ರೀಯ ಬುಕ್ಕಿಯನ್ನು ಬಂಧಿಸಲಾಗಿದೆ.

ಬಫ್ನಾ ಪ್ರಸ್ತುತ ನ್ಯಾಯಾಂಗ ವಶದಲ್ಲಿದ್ದಾರೆ. ಹರ್ಯಾಣದ ನಿವಾಸಿ ಸಯ್ಯಮ್ ವಿರುದ್ಧ ಲುಕ್‌ಔಟ್ ನೋಟಿಸ್ ನೀಡಲಾಗಿತ್ತು. ಕಾನೂನು ಸಂಸ್ಥೆಗಳಿಂದ  ತಲೆಮರೆಸಿಕೊಂಡಿದ್ದ ಈತ ವೆಸ್ಟ್‌ಇಂಡೀಸ್‌ನಲ್ಲಿ ಅಡಗಿ ಕುಳಿತ್ತಿದ್ದ ಎನ್ನಲಾಗಿದೆ.

ಇತ್ತೀಚೆಗೆ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಝಿ ಅವರನ್ನು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಲ್ಪಟ್ಟ್ಟಿದ್ದರು.

ಗೌತಮ್ ಹಾಗೂ ಖಾಝಿ ವಿರುದ್ಧ ಈ ವರ್ಷದ ಆಗಸ್ಟ್ 31ರಂದು ನಡೆದ ಬಳ್ಳಾರಿ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವಿನ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News