ಬಡ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯ: ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್

Update: 2019-11-10 17:16 GMT

ಬೆಂಗಳೂರು, ನ 10: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಗೊಳಿಸುವ ಉದ್ದೇಶದಿಂದ ಬೆಂಗಳೂರು ಸೌಥ್ ಸೆಂಟರ್‌ನಿಂದ ಬಿಎಸ್‌ಸಿ ಕರಿಯರ್ ಗೈಡೆನ್ಸ್ ಮತ್ತು ಐಎಎಸ್ ಅಕಾಡೆಮಿಗೆ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಚಾಲನೆ ನೀಡಿದರು.

ಬೆಂಗಳೂರಿನ ಕೃಷಿ ವಿಶ್ವದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಉತ್ತಮ ಮಾರ್ಗದಲ್ಲಿ ನಡೆಯುವುದು ಬಹುಮುಖ್ಯ ಹಾಗೂ ಅಗತ್ಯ ಎಂದು ಹೇಳಿದರು.

ಸೌತ್ ಸೆಂಟರ್‌ನ ಅಧ್ಯಕ್ಷ ಎನ್.ಪಿ. ರವೀಂದ್ರನಾಥ್ ನಾಯ್ಡು ಮಾತನಾಡಿ, ಬೆಂಗಳೂರು ಸೌಥ್ ಸೆಂಟರ್ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಸಹಾಯ, ವೃತ್ತಿ ಮಾರ್ಗದರ್ಶನ, ಐಎಎಸ್ ಮತ್ತಿತರ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ ಎಂದರು.

ಪಿಇಎಸ್ ಶಿಕ್ಷಣ ಸಂಸ್ಥೆಯ ಕುಲಪತಿ ಡಾ. ಎಂ.ಆರ್. ದೊರೆಸ್ವಾಮಿ, ಎಸ್ ಎಂ. ನರಸಿಂಹಪ್ಪ, ಆರ್. ದಯಾನಾಯಕ್, ಶಿವಶಂಕರ್ ಚೌದ್ರಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News