ರೊನಾಲ್ಡೊ ದಾಖಲೆ ಸರಿಗಟ್ಟಿದ ಮೆಸ್ಸಿ

Update: 2019-11-11 03:59 GMT

ಬಾರ್ಸಿಲೋನ, ನ.10: ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ರವಿವಾರ ನಡೆದ ಲಾ ಲಿಗ ಪಂದ್ಯದಲ್ಲಿ 34ನೇ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಸೆಲ್ಟಾ ವಿಗೊ ತಂಡದ ವಿರುದ್ಧ 4-1 ಅಂತರದಿಂದ ಗೆಲುವು ದಾಖಲಿಸಲು ನೆರವಾದರು. 34ನೇ ಹ್ಯಾಟ್ರಿಕ್ ಗೋಲು ಗಳಿಸಿರುವ ಮೆಸ್ಸಿ ಜುವೆಂಟಸ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಯನ್ನು ಸರಿಗಟ್ಟಿದರು.

ಮಾಜಿ ರಿಯಲ್ ಮ್ಯಾಡ್ರಿಡ್ ಆಟಗಾರ ರೊನಾಲ್ಡೊ ಕೂಡ ಈ ವರೆಗೆ 34 ಹ್ಯಾಟ್ರಿಕ್ ಗೋಲು ಗಳಿಸಿದ್ದಾರೆ. ಅರ್ಜೆಂಟೀನದ ಆಟಗಾರ ಮೆಸ್ಸಿ 23ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. 45+1 ಹಾಗೂ 48ನೇ ನಿಮಿಷಗಳಲ್ಲಿ ಇನ್ನೆರಡು ಗೋಲುಗಳನ್ನು ಬಾರಿಸಿದರು. ಸೆರ್ಗಿಯೊ ಬಸ್ಕೂಟ್ಸ್ ಬಾರ್ಸಿಲೋನದ ಪರ ನಾಲ್ಕನೇ ಗೋಲು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News