ಪ್ರಯಾಣಿಕರ ವಾಹನ ಮಾರಾಟ ತುಸು ಏರಿಕೆ, ಕಾರು ಮಾರಾಟ ನಿರಂತರ ಇಳಿಕೆ

Update: 2019-11-11 18:13 GMT

ಹೊಸದಿಲ್ಲಿ, ನ.11: ಕಳೆದ 12 ತಿಂಗಳಿನಲ್ಲೇ ಮೊದಲ ಬಾರಿಗೆ, ಅಕ್ಟೋಬರ್‌ನಲ್ಲಿ ಪ್ರಯಾಣಿಕರ ವಾಹನ ಮಾರಾಟ 0.28% ಏರಿಕೆಯಾಗಿದ್ದರೆ ಕಾರು ಮಾರಾಟ ನಿರಂತರ ಇಳಿಕೆಯಾಗುತ್ತಾ ಸಾಗಿದೆ ಎಂದು ಭಾರತದ ಮೋಟಾರುವಾಹನ ಉತ್ಪಾದಕರ ಸಂಘದ ವರದಿ ತಿಳಿಸಿದೆ.

ಪ್ರಯಾಣಿಕರ ಕಾರು, ವ್ಯಾನ್ ಮತ್ತು ಸರ್ವೋಪಯೋಗಿ ವಾಹನ ಸೇರಿದಂತೆ ಪ್ರಯಾಣಿಕರ ವಾಹನದ ಮಾರಾಟ ಪ್ರಮಾಣ ಅಕ್ಟೋಬರ್‌ನಲ್ಲಿ 2,85,027ಕ್ಕೆ ಹೆಚ್ಚಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,84,223 ವಾಹನ ಮಾರಾಟವಾಗಿತ್ತು. ಆದರೆ ವಾಣಿಜ್ಯ ಬಳಕೆಯ ಇತರ ವಾಹನಗಳ ಮಾರಾಟ ಕುಸಿದಿದೆ. ಅಕ್ಟೋಬರ್‌ನಲ್ಲಿ ಕಾರು ಮಾರಾಟ ಪ್ರಮಾಣದಲ್ಲಿ 6.34% ಕಡಿಮೆಯಾಗಿದ್ದು 1,73,649 ಕಾರು ಮಾರಾಟವಾಗಿದ್ದರೆ, ಮೋಟಾರ್ ಸೈಕಲ್‌ಗಳ ಮಾರಾಟ 15.88% ಕುಸಿತ ಕಂಡಿದ್ದು 11,16,970 ಮೋಟಾರ್ ಸೈಕಲ್‌ಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟ 14.43% ಕುಸಿತ ಕಂಡಿದ್ದು 17,57,246 ವಾಹನ ಮಾರಾಟವಾಗಿದೆ. ವಾಣಿಜ್ಯ ವಾಹನಗಳ ಮಾರಾಟ 23.31% ಕುಸಿತ ಕಂಡಿದ್ದು 66,773 ವಾಹನ ಮಾರಾಟವಾಗಿದೆ.

ಪ್ರಯಾಣಿಕರ ವಾಹನ, ದ್ವಿಚಕ್ರ ಮತ್ತು ವಾಣಿಜ್ಯ ವಾಹನಗಳ ಒಟ್ಟು ಮಾರಾಟದಲ್ಲಿ 12.76% ಇಳಿಕೆಯಾಗಿದ್ದು 21,76,136 ವಾಹನ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News