ಅಲ್‌-ಅಮೀನ್ ಯೂತ್ ವಿಂಗ್ ದುಬೈ ವತಿಯಿಂದ 'ಮೀಲಾದ್ ಫೆಸ್ಟ್ 2019' ಕಾರ್ಯಕ್ರಮ

Update: 2019-11-11 19:04 GMT

ದುಬೈ: ಪ್ರವಾದಿ ಮುಹಮ್ಮದ್ ರವರ ಜನ್ಮ ದಿನದ ಅಂಗವಾಗಿ ಮೀಲಾದ್ ಸಮಾವೇಶವು ಇತ್ತೀಚೆಗೆ ದುಬೈಯಲ್ಲಿ ಕೆ.ಕೆ ಜಬ್ಬಾರ್ ಕಲ್ಲಡ್ಕ ರವರ ನೇತೃತ್ವದಲ್ಲಿ ನಡೆಯಿತು.

ಅಬ್ದುಲ್ ಅಝೀಝ್ ಅಹ್ಸನಿ ಸುಳ್ಯ ಮೌಲೂದ್ ಪಾರಾಯಣಕ್ಕೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ನಿಝಾಮುದ್ದೀನ್ ಸಖಾಫಿ ಎಮ್ಮೆಮಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಫಿ ಮತ್ತು ಬಳಗ ಬುರ್ದಾ ಮಜ್ಲಿಸ್ ನಡೆಸಿದರು ಹಾಗೂ ಅಲ್- ಅಮೀನ್ ದಫ್ ಕಮಿಟಿ ತಂಡದಿಂದ ಅತ್ಯಾಕರ್ಷಕ ದಫ್ ಪ್ರದರ್ಶನ ನಡೆಯಿತು. ನಂತರ ನೂತನ ಶೈಲಿಯ ಮೀಲಾದ್ ಕಲಾ-ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಉಸ್ತಾದ್ ಸಲ್ಮಾನ್ ಅಝಹರಿಯವರು ಪ್ರವಾದಿ ಪ್ರೇಮದ ವಿಷಯವನ್ನಾಧರಿಸಿ ಮಾತನಾಡಿದರು. ಶಫೀಕ್ ಗಡಿಯಾರ್ ಹಾಗೂ ಖಲೀಲ್ ಇಚ್ಲಂಗೋಡ್ ಮತ್ತು ಅಬೂಬಕ್ಕರ್ ಸಿದ್ದೀಕ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೆ.ಕೆ.ಜಬ್ಬಾರ್ ಕಲ್ಲಡ್ಕ, ಬದ್ರುದ್ದೀನ್‌ ಹೆಂತಾರ್, ಅಶ್ರಫ್ ಪರ್ಲಡ್ಕ, ಹನೀಫ್ ಕಣ್ಣೂರು, ಖಲೀಲ್ ಇಚ್ಲಂಗೋಡು ಆಗಮಿಸಿದ್ದರು. ನಾಸಿರ್ ಕಲ್ಲಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು.

ಶಾಫಿ ಕಂದಲ್ ಸ್ವಾಗತಿಸಿದರು. ನಾಸಿರ್ ಕಲ್ಲಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News