ಎಲ್ಲಾ ಅನರ್ಹ ಶಾಸಕರು ನಾಳೆ ಬಿಜೆಪಿ ಸೇರ್ಪಡೆ: ಸಿಎಂ ಯಡಿಯೂರಪ್ಪ

Update: 2019-11-13 14:56 GMT

ಬೆಂಗಳೂರು, ನ.13: ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಅನರ್ಹ ಶಾಸಕರು ನಾಳೆ(ಗುರುವಾರ) ಬೆಳಗ್ಗೆ 10 ಗಂಟೆಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಬುಧವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಹೊಸದಿಲ್ಲಿಯಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ರನ್ನು ಭೇಟಿ ಮಾಡಿ, ಚರ್ಚೆ ನಡೆಸಿ ಬಿಜೆಪಿ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್, ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡು, ಅವರಿಗೆ ಪ್ರಾಥಮಿಕ ಸದಸ್ಯತ್ವವನ್ನು ನೀಡಲಿದ್ದಾರೆ. ಉಪ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವ ಕುರಿತು ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಚುನಾವಣಾ ಉಸ್ತುವಾರಿಗಳ ನೇಮಕ: ಉಪ ಚುನಾವಣೆ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೋರ್ ಕಮಿಟಿ ನನ್ನನ್ನು ನೇಮಕ ಮಾಡಿದೆ. ಅಲ್ಲದೆ, ಪತ್ರಿಯೊಂದು ಕ್ಷೇತ್ರಕ್ಕೂ ಓರ್ವ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.

ಅಥಣಿ ವಿಧಾನಸಭಾ ಕ್ಷೇತ್ರ: ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ, ಶ್ರೀಕಾಂತ್ ಕುಲಕರ್ಣಿ, ಅಣ್ಣಾ ಸಾಹೇಬ್ ಜೊಲ್ಲೆ, ಕಾಗವಾ: ಕೆ.ಎಸ್.ಈಶ್ವರಪ್ಪ, ಸಿ.ಸಿ.ಪಾಟೀಲ್, ಮಹಾಂತೇಶ್ ಕವಟಗಿಮಠ, ಪಿ.ರಾಜೀವ್, ಅರವಿಂದ ಬೆಲ್ಲದ್,

ಗೋಕಾಕ್: ಕೇಂದ್ರ ಸಚಿವ ಸುರೇಶ್ ಅಂಗಡಿ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ಅಭಯ್ ಪಾಟೀಲ್, ಈರಣ್ಣ ಕಡಾಡಿ, ಎ.ಎಸ್.ಪಾಟೀಲ್ ನಡಹಳ್ಳಿ.

ಯಲ್ಲಾಪುರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(ಉಸ್ತುವಾರಿ), ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಅನಂತ್‌ಕುಮಾರ್ ಹೆಗಡೆ, ಹರೀಶ್ ಪೂಂಜಾ, ಲಿಂಗರಾಜಪಾಟೀಲ್,

ಹಿರೇಕೆರೂರು: ಬಸವರಾಜ ಬೊಮ್ಮಾಯಿ, ಯು.ಬಿ.ಬಣಕಾರ್, ಬಿ.ವೈ.ರಾಘವೇಂದ್ರ, ದತ್ತಾತ್ರಿ.

ರಾಣೆಬೆನ್ನೂರು: ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್, ಜಿ.ಎಂ.ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಗಿರೀಶ್ ಪಟೇಲ್,

ವಿಜಯನಗರ(ಹೊಸಪೇಟೆ): ಗೋವಿಂದ ಕಾರಜೋಳ, ಎನ್.ರವಿಕುಮಾರ್, ಗವಿಯಪ್ಪ, ಕರಡಿ ಸಂಗಣ್ಣ, ಹಾಲಪ್ಪ ಆಚಾರ್, ನಾರಾಯಣ್ ಸಾ ಭಾಂಡಗೆ, ದೇವೇಂದ್ರಪ್ಪ.

ಚಿಕ್ಕಬಳ್ಳಾಪುರ: ಡಿ.ವಿ.ಸದಾನಂದಗೌಡ, ಸಿ.ಟಿ.ರವಿ, ಪಿ.ಸಿ.ಮೋಹನ್, ಬಿ.ಎನ್.ಬಚ್ಚೇಗೌಡ, ಶಿವಕುಮಾರ್, ಡಾ.ಜಿ.ವಿ.ಮಂಜುನಾಥ್,

ಕೆ.ಆರ್.ಪುರ: ಆರ್.ಅಶೋಕ್, ಡಿ.ವಿ.ಸದಾನಂದಗೌಡ, ಪೂರ್ಣಿಮಾ ಶ್ರೀನಿವಾಸ್, ನಂದೀಶ್ ರೆಡ್ಡಿ, ಸತೀಶ್ ರೆಡ್ಡಿ, ಗೋಪಿನಾಥ್ ರೆಡ್ಡಿ.

ಯಶವಂತಪುರ: ಆರ್.ಅಶೋಕ್, ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದಗೌಡ, ಎಂ.ಕೃಷ್ಣಪ್ಪ, ಅಶ್ವಥ್ ನಾರಾಯಣ, ಜಗ್ಗೇಶ್,

ಮಹಾಲಕ್ಷ್ಮಿ ಲೇಔಟ್: ವಿ.ಸೋಮಣ್ಣ, ಎಸ್.ಸುರೇಶ್ ಕುಮಾರ್, ಸುಬ್ಬನರಸಿಂಹ,

ಶಿವಾಜಿನಗರ: ಸದಾಶಿವ, ಎಸ್.ಮುನಿರಾಜು, ನಿರ್ಮಲ್ ಕುಮಾರ್ ಸುರಾನಾ, ಎಸ್.ರಘು.

ಹೊಸಕೋಟೆ: ಡಾ.ಸಿ.ಎನ್.ಅಶ್ವಥ್‌ ನಾರಾಯಣ್, ಎಸ್.ಆರ್.ವಿಶ್ವನಾಥ್, ಸಚ್ಚಿದಾನಂದಮೂರ್ತಿ, ಎ.ನಾರಾಯಣಸ್ವಾಮಿ,

ಕೆ.ಆರ್.ಪೇಟೆ: ಜೆ.ಸಿ.ಮಾಧುಸ್ವಾಮಿ, ಬಿ.ವೈ.ವಿಜಯೇಂದ್ರ, ಪ್ರೀತಮ್‌ಗೌಡ, ಶ್ರೀವಾಸ್ತ,

ಹುಣಸೂರು: ಬಿ.ಶ್ರೀರಾಮುಲು, ಮೈ.ವಿ.ರವಿಶಂಕರ್, ವಿಜಯಶಂಕರ್, ಪ್ರತಾಪ್‌ಸಿಂಹ, ಅಪ್ಪಚ್ಚು ರಂಜನ್.

ಪುತ್ರನ ಪರ ಈಶ್ವರಪ್ಪ ಲಾಬಿ: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಅನರ್ಹ ಶಾಸಕ ಆರ್.ಶಂಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ, ತಮ್ಮ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೋರ್ ಕಮಿಟಿ ಸಭೆಯಲ್ಲಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಅದೇ ರೀತಿ, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ಬದಲು ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್ ಗೌಡಗೆ ಟಿಕೆಟ್ ನೀಡಲು ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಸಂಬಂಧ ನಾಳೆ ಜಿ.ಟಿ.ದೇವೇಗೌಡ ಹಾಗೂ ಎಚ್.ವಿಶ್ವನಾಥ್ ಜೊತೆ ಚರ್ಚೆ ನಡೆಸಲು ಬಿಜೆಪಿ ನಾಯಕರು ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News