ವಾಟ್ಸ್ ಆ್ಯಪ್ ಮೂಲಕ ವೇಶ್ಯಾವಾಟಿಕೆ ದಂಧೆ ಆರೋಪ: ಆರು ಯುವಕರ ಬಂಧನ

Update: 2019-11-13 16:56 GMT

ಬೆಂಗಳೂರು, ನ.13: ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ಮೂಲಕವೇ ಗಿರಾಕಿಗಳನ್ನು ಹಿಡಿದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಆರು ಜನ ಯುವಕರನ್ನು ಸಿಸಿಬಿಯ ಮಹಿಳಾ ರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಚೋಳರಪಾಳ್ಯ ನಿವಾಸಿ ಮಹೇಶ್, ಹೊರಮಾವು ಮನುಕುಮಾರ್, ಆಂಧ್ರಹಳ್ಳಿ ಮನುಕುಮಾರ್, ಹಾಸನ ಜಿಲ್ಲೆಯ ಜಯನಗರ ನಿವಾಸಿ ಸ್ವರೂಪ್, ರವಿ ಹಾಗೂ ಕೃಷ್ಣ ಬಂಧಿತ ಆರೋಪಿಗಳೆಂದು ಸಿಸಿಬಿ ತಿಳಿಸಿದೆ.

ಇಲ್ಲಿನ ಕೆಆರ್‌ಪುರಂನ ಶಾಂತಾಬಾಯಿ ರಸ್ತೆಯ ಮಹಡಿಯೊಂದರಲ್ಲಿ ಉದ್ಯೋಗ ನೆಪದಲ್ಲಿ ಹೊರ ರಾಜ್ಯದಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿಯ ಮಹಿಳಾ ರಕ್ಷಣಾ ದಳದ ಪೊಲೀಸರು, ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಾಟ್ಸ್ ಆ್ಯಪ್ ದಂಧೆ?: ವಾಟ್ಸ್ ಆ್ಯಪ್ ಮೂಲಕ ಯುವತಿಯರ ಫೋಟೋಗಳನ್ನು ಕಳುಹಿಸುತ್ತಿದ್ದ ಆರೋಪಿಗಳು, ಓರ್ವ ಗಿರಾಕಿಯಿಂದ 2ರಿಂದ 3 ಸಾವಿರ ರೂ. ವಸೂಲಿ ಮಾಡಿ, ಲೈಂಗಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆ ನಡೆಸಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಬಂಧಿತರಿಂದ 8 ಮೊಬೈಲ್, 15 ಸಾವಿರ ರೂ. ನಗದು, ಬೈಕ್ ಜಪ್ತಿ ಮಾಡಿ, ಇಬ್ಬರು ಪಶ್ಚಿಮ ಬಂಗಾಳ ಮೂಲದ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಈ ಸಂಬಂಧ ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News