ಬೆಂಗಳೂರಿನಿಂದ ಆರು ನಗರಗಳಿಗೆ ವಿಮಾನ ಸೇವೆ

Update: 2019-11-13 17:51 GMT

ಬೆಂಗಳೂರು, ನ. 13: ನಗರದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರು ನಗರಗಳಿಗೆ ವಿಮಾನ ಸೇವೆ ಆರಂಭಿಸಲು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಧರಿಸಿದ್ದು, ಹೊಸದಾಗಿ ಬೆಂಗಳೂರಿನಿಂದ ಜೈ ಸಲ್ಮೇರ್, ಜೋಧ್‌ಪುರ, ಜರ್ಸುಗುಡ, ಬೀದರ್ ಮತ್ತು ತೂತುಕುಡಿ ನಗರಗಳಿಗೆ ವಿಮಾನ ಸೇವೆ ಆರಂಭಿಸಲಿದೆ.

ಇದರೊಂದಿಗೆ ಇಥಿಯೋಪಿಯಾದ ಆಡಿಸ್ ಅಬಾಗೆ ಬೆಂಗಳೂರಿನಿಂದ ನೇರ ಮಾನ ಸೇವೆ ಆರಂಭವಾಗಲಿದೆ. ಜೆಟ್ ಏರ್‌ವೇಸ್ ಸೇವೆ ಸ್ಥಗಿತಗೊಂಡ ನಂತರ, ಆಮಸ್ಟರ್ ಡ್ಯಾಂ ಕಡೆಗಿನ ವೈಮಾನಿಕ ಸೇವೆ ಶೀಘ್ರ ಪುನರಾರಂಭಗೊಳ್ಳಲಿದ್ದು, ರಾಯಲ್ ಡಚ್ ಮತ್ತು ಇಥಿಯೋಪಿಯನ್ ಏರ್‌ಲೈನ್ ಸಂಸ್ಥೆ ಬೆಂಗಳೂರಿನಿಂದ ಹಾರಾಟ ನಡೆಸಲು ಸಜ್ಜಾಗಿದೆ. ವಿಮಾನ ನಿಲ್ದಾಣ ಪ್ರತಿದಿನ ಸುಮಾರು 611 ಏಷಿಯಾ ಮತ್ತು 89 ಅಂತರ್‌ರಾಷ್ಟ್ರೀಯ ವಿಮಾನ ಸಂಚಾರವನ್ನು ಹೊಂದುವ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ 635 ದೇಶೀಯ ಮತ್ತು 92 ಅಂತರ್‌ರಾಷ್ಟ್ರೀಯ, ಒಟ್ಟು 725 ವಿಮಾನ ಸಂಚಾರ ನಿರೀಕ್ಷೆ ಹೊಂದಲಾಗಿದೆ.

ಇಥಿಯೋಪಿಯನ್ ಏರ್‌ಲೈನ್ ಆಡಿಸ್ ಅಬಾಗೆ ನಾಲ್ಕು ಸಾಪ್ತಾಹಿಕ ತಡೆರಹಿತ ವಿಮಾನ ಹಾರಾಟ ನಡೆಸಲಿದೆ. ರಾಯಲ್ ಡಚ್ ಮೂರು ಸಾಪ್ತಾಹಿಕ ವಿಮಾನಗಳು ಆಮಸ್ಟರ್ ಡ್ಯಾಂಗೆ ಸಂಚಾರ ನಡೆಸಲಿವೆ. ಇದರೊಂದಿಗೆ ಬೆಂಗಳೂರಿನಿಂದ 25 ಅಂತರ್‌ರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಂತೆ, 82 ತಾಣಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News