ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಕಡ್ಡಾಯ

Update: 2019-11-13 18:11 GMT

ಬೆಂಗಳೂರು, ನ.13: ಬಿಬಿಎಂಪಿಯಿಂದ ಪರವಾನಿಗೆ ಪಡೆದಿರುವ ಅಂಗಡಿ ಮುಗ್ಗಟ್ಟು, ಹೊಟೇಲ್‌ಗಳು, ಕಂಪನಿಗಳು ಅಳವಡಿಸಿರುವ ಅಥವಾ ಅಳವಡಿಸಲಿರುವ ನಾಮಫಲಕಗಳು ಕನ್ನಡದಲ್ಲಿದ್ದು, ಅಗ್ರಸ್ಥಾನ ಹೊಂದಿರುವುದು ಕಡ್ಡಾಯ ಎಂದು ಬಿಬಿಎಂಪಿ ತಿಳಿಸಿದೆ.

ನಾಮಫಲಕಗಳಲ್ಲಿ ಕನಿಷ್ಠ ಶೇ.60ರಷ್ಟು ಕನ್ನಡ ಭಾಷೆಯಲ್ಲಿರುವಂತೆ ಮತ್ತು ಸ್ಪಷ್ಟವಾಗಿ ಕಾಣುವಂತೆ ಕನ್ನಡ ಪದಗಳನ್ನು ಬಳಸಿರಬೇಕು. ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವವರು ಈ ಮಾನದಂಡ ಪಾಲಿಸಬೇಕು. ಈ ಹಿಂದೆ ಪರವಾನಿಗೆ ಪಡೆದಿದ್ದರೂ ಸಹ ಈ ಕೂಡಲೇ ತಿಳಿಸಿರುವಂತೆ ನಾಮಫಲಕ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ನಾಮಫಲಕಗಳಲ್ಲಿ ಕನ್ನಡವನ್ನು ಅಗ್ರಸ್ಥಾನದಲ್ಲಿ ಬಳಸದಿದ್ದರೆ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News