ಮುಂಬೆ ಇಂಡಿಯನ್ಸ್ ಗೆ ಟ್ರೆಂಟ್ ಬೌಲ್ಟ್, ರಾಜಸ್ಥಾನಕ್ಕೆ ರಾಜಪೂತ್

Update: 2019-11-14 02:04 GMT

ಹೊಸದಿಲ್ಲಿ, ನ.13: ಐಪಿಎಲ್ 2020ರ ಋತುವಿಗೆ ಎರಡು ಪ್ರಮುಖ ವರ್ಗಾವಣೆಯಾಗಿದ್ದು ನ್ಯೂಝಿಲ್ಯಾಂಡ್‌ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ವರ್ಗಾವಣೆಯಾದರೆ, ಅಂಕಿತ್ ರಾಜಪೂತ್ ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ರಾಜಸ್ಥಾನ ರಾಯಲ್ಸ್‌ಗೆ ವರ್ಗಾವಣೆಯಾಗಿದ್ದಾರೆ. ವಿಶ್ವ ಏಕದಿನ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಬೌಲ್ಟ್ ಹಾಗೂ ಜಸ್‌ಪ್ರೀತ್ ಬುಮ್ರಾ ಕ್ರಮವಾಗಿ ನಂ.1 ಹಾಗೂ ನಂ.2ನೇ ಸ್ಥಾನದಲ್ಲಿದ್ದಾರೆ. ಮುಂಬರುವ ಋತುವಿನಲ್ಲಿ ಮುಂಬೈ ಫ್ರಾಂಚೈಸಿ ಪರ ಒಟ್ಟಿಗೆ ಆಡುವ ಸಾಧ್ಯತೆಯಿದೆ.

 ಇನ್ನಷ್ಟೇ ಟೀಮ್ ಇಂಡಿಯಾದಲ್ಲಿ ಆಡಬೇಕಾಗಿರುವ ರಾಜಪೂತ್ ಐಪಿಎಲ್‌ನಲ್ಲಿ ಐದು ವಿಕೆಟ್ ಗೊಂಚಲು(5-14)ಪಡೆದ ಏಕೈಕ ಆಟಗಾರನಾಗಿದ್ದಾರೆ. 2015ರ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಪೂತ್ 5 ವಿಕೆಟ್ ಗೊಂಚಲು ಪಡೆದಿದ್ದರು. ರಾಜಪೂತ್‌ರನ್ನು ರಾಜಸ್ಥಾನಕ್ಕೆ ಬಿಟ್ಟುಕೊಟ್ಟಿರುವ ಪಂಜಾಬ್ ತಂಡ ರಾಜಪೂತ್ ಬದಲಿಗೆ ಸ್ಪಿನ್ನರ್ ಕೆ.ಗೌತಮ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗೆ ಮೊದಲು ಪಂಜಾಬ್ ತಂಡದಿಂದ ಬಿಡುಗಡೆಯಾಗಿರುವ ಎರಡನೇ ಬೌಲರ್ ರಾಜಪೂತ್. ಆರ್. ಅಶ್ವಿನ್ ಈಗಾಗಲೇ ಪಂಜಾಬ್ ತಂಡದಿಂದ ಬಿಡುಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News