ಇಂದಿನಿಂದ ಭಾರತ -ಬಾಂಗ್ಲಾ ಮೊದಲ ಟೆಸ್ಟ್

Update: 2019-11-14 02:12 GMT

ಇಂದೋರ್, ನ.13: ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಮೊದಲ ಪಂದ್ಯ ಹೋಳ್ಕರ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಳ್ಳಲಿದೆ.

ನಂ.1 ಟೆಸ್ಟ್ ತಂಡವಾಗಿರುವ ಭಾರತ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಗೆಲುವಿನೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿತ್ತು. ಅದೇ ಪ್ರದರ್ಶನವನ್ನು ಮುಂದುವರಿಸುವ ಯೋಜನೆಯಲ್ಲಿದೆ.

ಬಾಂಗ್ಲಾಕ್ಕೆ ಇದು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪಂದ್ಯವಾಗಿರುತ್ತದೆ. ಈ ಪಂದ್ಯದಲ್ಲಿ ಬಾಂಗ್ಲಾ ಇಬ್ಬರು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಆಡಲಿದೆ. ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಮತ್ತು ತಮೀಮ್ ಇಕ್ಬಾಲ್ ಸೇವೆ ತಂಡಕ್ಕೆ ಅಲಭ್ಯವಾಗಿದೆ.

 ಇತ್ತೀಚೆಗೆ ನಡೆದ ಟ್ವೆಂಟಿ-20 ಸರಣಿಯಲ್ಲಿ ಬಾಂಗ್ಲಾವನ್ನು ಭಾರತ 2-1 ಅಂತರದಲ್ಲಿ ಮಣಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಬಾಂಗ್ಲಾಕ್ಕೆ ಟೆಸ್ಟ್ ಸರಣಿ ಕಠಿಣವಾಗಿದ್ದರೂ, ತಂಡದ ಬ್ಯಾಟಿಂಗ್ ಶಕ್ತಿ ಪರೀಕ್ಷೆಗೊಳಗಾಗಲಿದೆ. ತಂಡದಲ್ಲಿರುವ ಯುವ ಪ್ರತಿಭಾವಂತ ಆಟಗಾರರು ಭಾರತಕ್ಕೆ ಸವಾಲೊಡ್ಡಲು ಎದುರು ನೋಡುತ್ತಿದ್ದಾರೆ.

►ತಂಡದ ಸಮಾಚಾರ : ಕಳೆದ ಐದು ಟೆಸ್ಟ್ ಗಳಲ್ಲಿ ಚೇತೇಶ್ವರ ಪೂಜಾರ 25.62 ರನ್ ಸರಾಸರಿಯಂತೆ 205 ರನ್ ಗಳಿಸಿದ್ದಾರೆ. ಅವರು ದ.ಆಫ್ರಿಕಾ ವಿರುದ್ಧ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆದರೆ ಅವರಿಗೆ ಇದು ತೃಪ್ತಿ ತಂದಿಲ್ಲ. ಅವರಿಗೆ ಶತಕ ಸಿಡಿಸುವ ತನಕ ನೆಮ್ಮದಿ ಇಲ್ಲದಂತಾಗಿದೆ. ಬಾಂಗ್ಲಾ ವಿರುದ್ಧ ಅವರು ಶತಕ ಸಿಡಿಸುವ ಯೋಜನೆಯಲ್ಲಿದ್ದಾರೆ.ಪೂಜಾರ ಈಹಿಂದೆ 14 ಇನಿಂಗ್ಸ್‌ಗಳಲ್ಲಿ ಶತಕದ ಬರವನ್ನು ಎದುರಿಸಿದ್ದರು. ಇಂದೋರ್‌ನಲ್ಲಿ ಅದನ್ನು ನಿವಾರಿಸಿದ್ದರು.

ಮೆಹಿದಿ ಹಸನ್ ಮತ್ತು ತೈಜುಲ್ ಇಸ್ಲಾಮ್: ಆಲ್‌ರೌಂಡರ್ ಮೆಹಿದಿ ಹಸನ್ ಮತ್ತು ತೈಜುಲ್ ಇಸ್ಲಾಮ್ ತವರಿನಲ್ಲಿ ಪ್ರದರ್ಶನ ಚೆನ್ನಾಗಿಲ್ಲ. ಆದರೆ ಇಬ್ಬರು ಸ್ಪಿನ್ನರ್‌ಗಳು ವಿದೇಶದಲ್ಲಿ ಚೆನ್ನಾಗಿ ಪ್ರದರ್ಶನ ನೀಡುತ್ತಾರೆ. ಭಾರತದ ಪಿಚ್‌ಗಳಲ್ಲಿ ಅವರು ಸ್ವಲ್ಪ ಯಶಸ್ಸು ಸಾಧಿಸುವುದನ್ನು ನಿರೀಕ್ಷಿಸಲಾಗಿದೆ. ಶಾಕಿಬ್ ಇಲ್ಲದ ಕಾರಣದಿಂದಾಗಿ ಇವರ ಹೆಗಲಿಗೆ ಹೆಚ್ಚಿ ನ ಜವಾಬ್ದಾರಿ ಬಿದ್ದಿದೆ. ಇತ್ತೀಚೆಗೆ ನ್ಯಾಶನಲ್ ಕ್ರಿಕೆಟ್ ಲೀಗ್‌ನಲ್ಲಿ ದ್ವಿಶತಕ ಸಿಡಿಸಿರುವ ಸೈಫ್ ಹಸನ್ ಮತ್ತು ಇಮ್ರುಲ್ ಕೈಸ್ ಅವರ ನಡುವೆ ಅಗ್ರ ಸರದಿಯ ಅವಕಾಶಕ್ಕಾಗಿ ಪೈಪೋಟಿ ಕಂಡು ಬಂದಿದೆ. ಮಧ್ಯಮ ಸರದಿಯ ದಾಂಡಿಗ ಮೊಸಾದೆಕ್ ಹುಸೈನ್ ತನ್ನ ಕುಟುಂಬದ ತುರ್ತು ಕಾರ್ಯ ನಿಮಿತ್ತ ತವರಿಗೆ ವಾಪಸಾಗಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ ಮೂವರು ವೇಗದ ಬೌಲರ್‌ಗಳನ್ನು ದಾಳಿಗಿಳಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಐವರು ಬೌಲರ್‌ಗಳು ತಂಡದಲ್ಲಿದ್ದರು. ಅದೇ ಪ್ರಯೋಗವನ್ನು ಬಾಂಗ್ಲಾ ವಿರುದ್ಧ ಮುಂದುವರಿಸುವ ಯೋಜನೆಯಲ್ಲಿದ್ದಾರೆ.

►ಪಿಚ್ ಹಾಗೂ ವಾತಾವರಣ: ಇಂದೋರ್‌ನ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಆಕಾಶ ಶುಭ್ರವಾಗಿದ್ದು, ಮಳೆಯ ಯಾವುದೇ ಸೂಚನೆ ಇಲ್ಲ. ವಾತಾವರಣ ಬಿಸಿಯಾಗಿದ್ದರೂ ಹಿತಕರವಾಗಿದೆ. ಮಧ್ಯಾಹ್ನದ ಬಳಿಕ ವಾತಾವರಣದ ಉಷ್ಣತೆ 20 ಸೆಲ್ಸಿಯಸ್ ಇರುತ್ತದೆ  ಇಂದೋರ್‌ನ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಆಕಾಶ ಶುಭ್ರವಾಗಿದ್ದು, ಮಳೆಯ ಯಾವುದೇ ಸೂಚನೆ ಇಲ್ಲ. ವಾತಾವರಣ ಬಿಸಿಯಾಗಿದ್ದರೂ ಹಿತಕರವಾಗಿದೆ. ಮಧ್ಯಾಹ್ನದ ಬಳಿಕ ವಾತಾವರಣದ ಉಷ್ಣತೆ 20 ಸೆಲ್ಸಿಯಸ್ ಇರುತ್ತದೆ.

ಪಂದ್ಯದ ಸಮಯ: ಬೆಳಗ್ಗೆ 9:30 ಗಂಟೆಗೆ

ವಿಭಿನ್ನ ವಾತಾವರಣದಲ್ಲಿ ಆಡಲಿರುವ ಹಿನ್ನೆಲೆಯಲ್ಲಿ ಖಂಡಿತವಾಗಿಯೂ ಬಾಂಗ್ಲಾ ಆಟಗಾರರು ತಮ್ಮ ಆಟದ ಯೋಜನೆಯನ್ನು ರೂಪಿಸಿರುವ ಸಾಧ್ಯತೆ ಇದೆ. ನಾವು ಚೆನ್ನಾಗಿ ಆಡಿದರೆ ಫಲಿತಾಂಶ ನಮ್ಮ ಪರವಾಗಿರುತ್ತದೆ. ನಾವು ಬಾಂಗ್ಲಾವನ್ನು ಲಘವಾಗಿ ಪರಿಗಣಿಸಲಾರೆವು. ಅವರು ಚೆನ್ನಾಗಿ ಆಡಲು ಸಮರ್ಥರು. ಅವರು ಕೆಲವು ಉತ್ತಮ ಕ್ರಿಕೆಟ್ ಆಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಅವರ ಬಗ್ಗೆ ಗೌರವವನ್ನು ಹೊಂದಿದ್ದೇವೆ ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ತಂಡದಲ್ಲಿ ನಮಗೆ ನಂಬಿಕೆ ಇರುತ್ತದೆ.

ವಿರಾಟ್ ಕೊಹ್ಲಿ , ಭಾರತ ಕ್ರಿಕೆಟ್ ತಂಡದ ನಾಯಕ

ನಾವು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ. ಈ ಸರಣಿಯಿಂದ ಹೆಚ್ಚಿನ ನಿರೀಕ್ಷೆ ಇಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ಒತ್ತಡವನ್ನು ತೆಗೆದುಕೊಳ್ಳುತ್ತಿಲ್ಲ. ನಾವು ಉತ್ತಮ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೇವೆ.

 ಮೊಮಿನುಲ್ ಹಕ್ , ಬಾಂಗ್ಲಾದೇಶ ತಂಡದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News