ಪ್ರಥಮ ಟೆಸ್ಟ್: ಬಾಂಗ್ಲಾ 140/7(54 ಓವರ್)

Update: 2019-11-14 12:23 GMT

 ಇಂದೋರ‍್, ನ.14: ಇಲ್ಲಿ ಆರಂಭಗೊಂಡ ಪ್ರಥಮ ಕ್ರಿಕೆಟ್ ಟೆಸ್ಟ್ ನ ಮೊದಲ ದಿನ ಟೀಮ್ ಇಂಡಿಯಾದ ಶಿಸ್ತಿನ  ಬೌಲಿಂಗ್ ದಾಳಿಗೆ ಸಿಲುಕಿದ ಪ್ರವಾಸಿ ಬಾಂಗ್ಲಾದೇಶ ತಂಡ ಚಹಾ  ವಿರಾಮದ  ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ 54 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿದೆ.

ಮುಹಮ್ಮದ್ ಶಮಿ(27ಕ್ಕೆ 3), ರವಿಚಂದ್ರನ್ ಅಶ್ವಿನ್ (43ಕ್ಕೆ 2), ಇಶಾಂತ್ ಶರ್ಮಾ(18ಕ್ಕೆ 1) ಮತ್ತು ಉಮೇಶ್ ಯಾದವ್ (39ಕ್ಕೆ 1) ದಾಳಿಗೆ ಸಿಲುಕಿದ ಬಾಂಗ್ಲಾದೇಶ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಆರಂಭಿಕ ಬ್ಯಾಟ್ಸ್ ಮನ್  ಶಾದ್ಮನ್ ಇಸ್ಲಾಮ್(6), ಇಮ್ರುಲ್ ಕೈಸ್ (6),ನಾಯಕ ಮೊಮಿನುಲ್ ಹಕ್(37)  ಮುಹಮ್ಮದ್ ಮಿಥುನ್ (13), ಮುಶ್ಪೀಕುರ್ರಹೀಂ (43), ಮಹಮ್ಮದುಲ್ಲಾ(10) ಮತ್ತು ಮೆಹೆದಿ ಹಸನ್ (0) ಔಟಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News