ಒಮಾನ್: ಕೆಸಿಎಫ್ 'ಐ ಟೀಮ್' ವತಿಯಿಂದ ನ.15ರಂದು ಮೀಲಾದ್ ಕಾನ್ಫರೆನ್ಸ್

Update: 2019-11-14 15:40 GMT

ಒಮಾನ್, ನ.14: ಪ್ರವಾದಿ ಮುಹಮ್ಮದ್(ಸ.ಅ)ರವರ ಜನ್ಮ ದಿನಾಚರಣೆಯ ಪ್ರಯುಕ್ತ ಕೆಸಿಎಫ್ ಒಮಾನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ 'ಐ ಟೀಮ್' ವತಿಯಿಂದ ನ.15, ಶುಕ್ರವಾರ ಸಂಜೆ ಬರ್ಕಾದ 'ಬರ್ಕ ರೆಸಿಡೆನ್ಸಿ'ಯಲ್ಲಿ ಮೀಲಾದ್ ಕಾನ್ಫರೆನ್ಸ್ ಹಾಗೂ ಬುರ್ದಾ ಮಜ್ಲಿಸ್ ನಡೆಯಲಿದೆ.

ಕಾರ್ಯಕ್ರಮಕ್ಕೆ ಶೈಖುನಾ ಎ.ಪಿ ಮುಹಮ್ಮದ್ ಮುಸ್ಲಿಯಾರ್ ನೇತೃತ್ವ ನೀಡಲಿದ್ದಾರೆ. ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ. ಶುಕೂರ್ ಇರ್ಫಾನಿ ಚೆಂಬರಿಕ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶೈಖ್ ಸಾಲಿಂ ಮುಹಮ್ಮದ್ ಅಲ್ ಸಿಯಾಬಿ, ಕೆಸಿಎಫ್ ಒಮಾನ್ ಸಂಘಟನಾಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ, ಕೆಸಿಎಫ್ ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, ಕೆಸಿಎಫ್ ಒಮಾನ್ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಶಫೀಕ್ ಬುಖಾರಿ ICF ಒಮಾನ್, ಕೆಸಿಎಫ್ ನಾಯಕರು, ICF, RSC ನಾಯಕರು ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಕೆಸಿಎಫ್ ಒಮಾನ್ 'ಐ ಟೀಮ್' ಚೇರ್ಮೇನ್ ಇಕ್ಬಾಲ್ ಬೊಳ್ಮಾರ್ ಬರ್ಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News