ಶ್ರೀಲಂಕಾದ ಸರಣಿ ಖಚಿತ: ದಶಕಗಳ ಬಳಿಕ ಪಾಕಿಸ್ತಾನಕ್ಕೆ ಮರಳಲಿದೆ ಟೆಸ್ಟ್ ಕ್ರಿಕೆಟ್

Update: 2019-11-15 05:04 GMT

ಲಾಹೋರ್, ನ.14: ಈಗ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಡಿಸೆಂಬರ್‌ನಲ್ಲಿ ಆಡಲು ಶ್ರೀಲಂಕಾ ತಂಡ ಗುರುವಾರ ಸಮ್ಮತಿ ಸೂಚಿಸುವ ಮೂಲಕ 10 ವರ್ಷಕ್ಕೂ ಅಧಿಕ ಸಮಯದ ಬಳಿಕ ಪಾಕಿಸ್ತಾನಕ್ಕೆ ಟೆಸ್ಟ್ ಕ್ರಿಕೆಟ್ ಮರಳಲಿದೆ. ಭದ್ರತೆಯ ಭೀತಿಯನ್ನು ಮುಂದಿಟ್ಟುಕೊಂಡು ಏಕದಿನ ನಾಯಕ ಡಿ.ಕರುಣರತ್ನೆ ಹಾಗೂ ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ ಸಹಿತ 10 ಪ್ರಮುಖ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದರೂ ಈ ವರ್ಷದ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಶ್ರೀಲಂಕಾ ತಂಡ ಪಾಕ್ ವಿರುದ್ಧ ದ್ವಿಪಕ್ಷೀಯ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಗಳನ್ನು ಪಾಕ್ ನೆಲದಲ್ಲಿ ಆಡಿತ್ತು. ಮುಂಬರುವ ಸರಣಿಯ ಮೊದಲ ಟೆಸ್ಟ್ ಪಂದ್ಯವು ರಾವಲ್ಪಿಂಡಿಯಲ್ಲಿ ಡಿ.11ರಿಂದ 15 ಹಾಗೂ ಎರಡನೇ ಟೆಸ್ಟ್ ಕರಾಚಿಯಲ್ಲಿ ಡಿ.19 ರಿಂದ 23ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News