ಶಾಮಿಯಾನ ಮಾಲಕರ ಅಪಹರಣ ಪ್ರಕರಣ: ಐವರು ಆರೋಪಿಗಳ ಬಂಧನ

Update: 2019-11-15 13:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.15: ಶಾಮಿಯಾನ ಮಾಲಕರನ್ನು ಅಪಹರಣ ಆರೋಪ ಪ್ರಕರಣ ಸಂಬಂಧ ಐವರನ್ನು ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಶಿವಮೊಗ್ಗದ ಆಯನೂರಿನ ಯಶವಂತ್ ನಾಯ್ಕ(25), ಶರೀಫ್(26), ಹೊಸನಗರದ ಚಂದ್ರಶೇಖರ್(27), ದೇವನಹಳ್ಳಿಯ ಆನಂದ(28), ಕುಮಾರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬಾಣಸವಾಡಿಯ ನೆಹರು ರಸ್ತೆಯ ಖಾಸಗಿ ಟೆಂಟ್‌ಹೌಸ್ ಮಾಲಕ ಕೆ.ಪಿ.ರಾಮಾನುಜಂ, ತಿಪ್ಪಸಂದ್ರದ ಎಸ್‌ಎಂಇ ಶಾಮಿಯಾನದ ಮಾಲಕ ರವಿ ಎಂಬವರನ್ನು ಅಪಹರಿಸಿ, ದೇವನಹಳ್ಳಿ ವ್ಯಾಪ್ತಿಯ ಹಳೇ ಮನೆಯೊಂದರಲ್ಲಿ ಅಕ್ರಮ ಬಂಧನದಲ್ಲಿಟ್ಟುಕೊಂಡು ಹಲ್ಲೆ ನಡೆಸಿ ಬೆದರಿಸಿ ನಗದು ಚಿನ್ನಾಭರಣ ವಸೂಲಿ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಬಂಧಿತರಿಂದ 10 ಲಕ್ಷದ ಮೌಲ್ಯದ ಚಿನ್ನಾಭರಣ, ಕಾರು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News