ಮಾದರಿ ನೀತಿ ಸಂಹಿತೆ ಜಾರಿ: 94.69 ಲಕ್ಷ ರೂ.ವಶ

Update: 2019-11-15 16:36 GMT

ಬೆಂಗಳೂರು, ನ.15: 168 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 401 ಸ್ಥಾಯಿ ಕಣ್ಗಾವಲು ತಂಡಗಳು, 58 ಅಬಕಾರಿ ತಂಡಗಳು ಹಾಗೂ 18 ವಾಣಿಜ್ಯ ತೆರಿಗೆ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮುಖ್ಯ ಚುನಾವಣಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.

ಫ್ಲೈಯಿಂಗ್ ಸ್ಕ್ವಾಡ್ಸ್ ಸಾರ್ವಜನಿಕ ಕಟ್ಟಡಗಳ ವ್ಯಾಪ್ತಿಯ 1527 ಗೋಡೆ ಬರಹ, 7963 ಬಿತ್ತಿಚಿತ್ರ ಹಾಗೂ 2359 ಬ್ಯಾನರ್‌ಗಳನ್ನು ತೆಗೆದು ಹಾಕಲಾಗಿದೆ. ಖಾಸಗಿ ಕಟ್ಟಡಗಳ ವ್ಯಾಪ್ತಿಯಲ್ಲಿ 835 ಗೋಡೆ ಬರಹ, 1352 ಬಿತ್ತಿಚಿತ್ರ ಹಾಗೂ 1462 ಬ್ಯಾನರ್‌ಗಳನ್ನು ತೆಗೆದು ಹಾಕಲಾಗಿದೆ.

ಸ್ಥಾಯೀ ಕಣ್ಗಾವಲು ತಂಡಗಳು ಮಾದರಿ ನೀತಿ ಸಂಹಿತೆ ಆರಂಭವಾದ ದಿನದಿಂದ ಈವರೆಗೆ ಒಟ್ಟು 8 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿವೆ. ಫ್ಲೈಯಿಂಗ್ ಸ್ಕ್ವಾಡ್ಸ್ ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಕಳೆದ 24 ಗಂಟೆಗಳಲ್ಲಿ 7702 ರೂ.ಗಳನ್ನು ವಶಪಡಿಸಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 86,69,291 ರೂ.ನಗದು ಮತ್ತು 69,207 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿವೆ.

ಫ್ಲೈಯಿಂಗ್ ಸ್ಕ್ವಾಡ್ಸ್, ಸ್ಥಾಯೀ ಕಣ್ಗಾವಲು ತಂಡಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಒಟ್ಟು 94,69,291 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News