ಕಳವು ಪ್ರಕರಣ: ಆರೋಪಿ ಸೆರೆ, 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2019-11-15 17:25 GMT

ಬೆಂಗಳೂರು, ನ.15: ಕಳವು ಪ್ರಕರಣ ಸಂಬಂಧ ನೇಪಾಳ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು, 35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಕಮಲ್ಸಿಂಗ್ (28) ಎಂಬಾತ ಬಂಧಿತ ನೇಪಾಳಿ ವ್ಯಕ್ತಿಯಾಗಿದ್ದು, ಬೆಂಗಳೂರಿನ ಕಿತ್ತಗೂರಿನ ಹಳೇಹಳ್ಳಿಯಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳದ ಕೈಲಾಜ್ ಜಿಲ್ಲೆಯ ಆರೋಪಿಯು ಬಾಣಸವಾಡಿಯಲ್ಲಿ ನಡೆಸಿದ್ದ ಕನ್ನಗಳವು ಪ್ರಕರಣದ ಸಂಬಂಧ ಕಾರ್ಯಾಚರಣೆ ನಡೆಸಿದಾಗ ಸೆರೆಸಿಕ್ಕಿದ್ದಾನೆ. ಆರೋಪಿ, ಹೊರರಾಜ್ಯಗಳು ಸೇರಿದಂತೆ ಬೆಂಗಳೂರು ನಗರದಲ್ಲೂ ಕನ್ನಗಳವು ಕೃತ್ಯದಲ್ಲಿ ತೊಡಗಿದ್ದು, ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದಿದ್ದ ಎಂದು ತಿಳಿದು ಬಂದಿದೆ.

ಆರೋಪಿಯ ಬಂಧನದಿಂದ ಬಾಣಸವಾಡಿಯ 5, ರಾಮಮೂರ್ತಿ ನಗರದ 1 ಸೇರಿದಂತೆ 6 ಕನ್ನಗಳವು ಪ್ರಕರಣಗಳು ಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಈತನ ಸಹಚರ ಮೋಹನ್ ಸಿಂಗ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News