ಎಚ್ಚರ....ಇನ್ನು ಬೆಂಗಳೂರಿನ ಬೀದಿಗಳಲ್ಲಿ ಈ ತಪ್ಪು ಮಾಡಿದರೆ ಬೀಳಲಿದೆ ದಂಡ !

Update: 2019-11-15 18:02 GMT

ಬೆಂಗಳೂರು, ನ.15: ಸ್ವಚ್ಛ ಬೆಂಗಳೂರಿಗಾಗಿ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ಎಲ್ಲೆಂದರಲ್ಲಿ ಸುರಿಯುವ ತ್ಯಾಜ್ಯಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.

ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ದಂಡ ವಿಧಿಸಲು ಪ್ರಾರಂಭಿಸಿದ್ದು, ಮನೆಯ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸದೆ ಇದ್ದಲ್ಲಿ 100 ರೂ. ದಂಡ ಮತ್ತು ಬೀದಿಗಳಲ್ಲಿ ಕಸವನ್ನು ಎಸೆದರೆ 100 ರೂ. ವಿಧಿಸಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮತ್ತು ಬೀದಿಗಳಲ್ಲಿ ಉಗುಳಿದರೆ 100 ರೂ. ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಸ್ಥಾಪನೆಯಿಂದ ತ್ಯಾಜ್ಯವನ್ನು ಬೇರ್ಪಡಿಸದೆ ಇದ್ದಲ್ಲಿ 500 ರೂ. ದಂಡ ಮತ್ತು ರಸ್ತೆಯಲ್ಲಿ ನಿರ್ಮಾಣ ಭಗ್ನಾವಶೇಷಗಳನ್ನು ಎಸೆದರೆ 1000 ರೂ. ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News