ಎಚ್ಚರಿಕೆ...: ವಾಟ್ಸ್ಯಾಪ್ ನಲ್ಲಿ ಈ ವಿಡಿಯೋ ಬಂದರೆ ಡೌನ್ ಲೋಡ್ ಮಾಡಲೇಬೇಡಿ!

Update: 2019-11-17 16:04 GMT
Photo: businesstoday.in

ಅಪರಿಚಿತ ನಂಬರ್ ಒಂದರಿಂದ ನಿಮಗೆ ವಾಟ್ಸ್ಯಾಪ್ ನಲ್ಲಿ MP4 ವಿಡಿಯೋ ಫೈಲ್ ಬಂದಲ್ಲಿ ಎಚ್ಚರಿಕೆ ವಹಿಸಿ. ಏಕೆಂದರೆ ಇದೀಗ ಬಂದಿರುವ ವರದಿಗಳ ಪ್ರಕಾರ ಹ್ಯಾಕರ್ ಗಳು ಈ ವಿಡಿಯೋಗಳ ಮೂಲಕ ವಾಟ್ಸ್ಯಾಪ್ ಬಳಕೆದಾರರ ಮೊಬೈಲ್ ನೊಳಕ್ಕೆ ನುಸುಳಿ, ಖಾಸಗಿ ಮಾಹಿತಿಗಳನ್ನು ಕದಿಯುತ್ತಿದ್ದಾರೆ ಎನ್ನುವುದು ಖಚಿತಗೊಂಡಿದೆ.

MP4 ಫಾರ್ಮಾಟ್ ನಲ್ಲಿರುವ ವಿಡಿಯೋ ಒಂದನ್ನು ಕಳುಹಿಸುವ ಮೂಲಕ ಹ್ಯಾಕರ್ ಗಳು ಮತ್ತೊಬ್ಬರ ಫೋನ್ ನೊಳಗೆ ಸಾಧ್ಯವಾಗುತ್ತಿದೆ ಎನ್ನುವ ಆಘಾತಕಾರಿ ಸುದ್ದಿ ವಿಶ್ವಾದ್ಯಾಂತ ವಾಟ್ಸ್ಯಾಪ್ ಬಳಕೆದಾರರಲ್ಲಿ ಸುರಕ್ಷತೆಯ ಬಗ್ಗೆ ಭಾರೀ ಆತಂಕ ಮೂಡಿಸಿದೆ.

ಇತ್ತೀಚೆಗಷ್ಟೇ ಇಸ್ರೇಲಿ ಎನ್ ಎಸ್ ಒ ಗುಂಪೊಂದು ಪೆಗಾಸಸ್ ಎಂಬ ಸ್ಪೈವೇರ್ ಮೂಲಕ ಭಾರತೀಯರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು.

ಈ ಸುರಕ್ಷತಾ ಲೋಪವನ್ನು ವಾಟ್ಸ್ಯಾಪ್ ಈಗಾಗಲೇ ಒಪ್ಪಿಕೊಂಡಿದೆ. ಈ ಎಂಪಿ4 ಫೈಲ್ ರಿಮೋಟ್ ಕೋಡ್ ಎಕ್ಸಿಕ್ಯೂಶನ್ ಮತ್ತು ಸೇವೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಆ್ಯಂಡ್ರಾಯ್ಡ್ , ಐಒಎಸ್ ಮತ್ತು ವಿಂಡೋಸ್ ಫೋನ್ ಗಳ ಮೇಲೂ ಈ ವೈರಸ್ ದಾಳಿ ನಡೆಸುತ್ತದೆ.  

ಸದ್ಯದ ಮಟ್ಟಿಗೆ ಈ ಸಮಸ್ಯೆಯಿಂದ ಪಾರಾಗಲಿರುವ ಏಕೈಕ ಮಾರ್ಗವೆಂದರೆ ಅಪರಿಚಿತ ನಂಬರ್ ಗಳಿಂದ ಬಂದ ವಿಡಿಯೋವನ್ನು ಡೌನ್ ಲೋಡ್ ಮಾಡದೇ ಇರುವುದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News