“ಕಾಶ್ಮೀರದಲ್ಲಿ ಅತ್ಯಾಚಾರಕ್ಕೆ ಅತ್ಯಾಚಾರ, ಕೊಲೆಗೆ ಕೊಲೆ”

Update: 2019-11-17 17:14 GMT

 ಹೊಸದಿಲ್ಲಿ, ನ.17: “ಕೊಲೆಗೆ ಪ್ರತಿಯಾಗಿ ಕೊಲೆ, ಅತ್ಯಾಚಾರಕ್ಕೆ ಪ್ರತಿಯಾಗಿ ಅತ್ಯಾಚಾರ. ಇದು ಮಿಲಿಟರಿ ತಂತ್ರಗಾರಿಕೆಯ ಭಾಗವಾಗಿದೆ” ಎಂದು ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ನೀಡಿರುವ ಹೇಳಿಕೆ ವೈರಲ್ ಆಗಿದೆ.

ಟಿವಿ9 ಭಾರತ್‌ವರ್ಷ ಕಾರ್ಯಕ್ರಮದಲ್ಲಿ ಕಾಶ್ಮೀರಿ ಪಂಡಿತರ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ವಾದ ಮಂಡಿಸಿದ ನಿವೃತ್ತ ಮೇಜರ್ ಜನರಲ್ ಎಸ್‌ಪಿ ಸಿನ್ಹ ಈ ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೆ ಮುಗಿಸದೆ, ತನ್ನ ಹೇಳಿಕೆಯ ಬಗ್ಗೆ ಚರ್ಚೆ ಕಾರ್ಯಕ್ರಮದ ವೀಕ್ಷಕರಲ್ಲಿ ತ್ವರಿತ ಸಮೀಕ್ಷೆ ನಡೆಸಿದ್ದಾರೆ. ವೀಕ್ಷಕರಲ್ಲಿ ಕೆಲವರು(ಮಹಿಳೆಯರೂ ಇದ್ದರು) ಸಿನ್ಹರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರರು ಸಿನ್ಹಾರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದಾರೆ. ಆದರೆ ತಮ್ಮ ಹೇಳಿಕೆಗೆ ಬದ್ಧ ಎಂದು ಸಿನ್ಹ ಪುನರುಚ್ಚರಿಸಿದ್ದಾರೆ.

ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿರುವಂತೆಯೇ ಸೇನಾಪಡೆ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಸೇನಾಪಡೆಯ ನಿವೃತ್ತ, ಹಿರಿಯ ಅಧಿಕಾರಿಗಳು ಸಿನ್ಹರ ಹೇಳಿಕೆ ಸಂವೇದನಾರಹಿತ ಮತ್ತು ದುರದೃಷ್ಟಕರ ಎಂದು ಖಂಡಿಸಿದ್ದಾರೆ. ಅಲ್ಲದೆ ದೇಶದ ವಿವಿಧೆಡೆಯಿಂದ ಖಂಡನೆ ವ್ಯಕ್ತವಾಗಿದ್ದು ಸಿನ್ಹ ಕ್ಷಮೆ ಯಾಚಿಸುವಂತೆ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News