ಸರಕಾರವು ಆರ್‌ಟಿಐ ಪಾಲಿಸುತ್ತ್ತಿದೆ: ಆರ್ಥಿಕ ದತ್ತಾಂಶಗಳ ‘ಮುಚ್ಚಿಡುವಿಕೆ ’ಗೆ ಚಿದಂಬರಂ ಟೀಕೆ

Update: 2019-11-17 17:36 GMT

ಹೊಸದಿಲ್ಲಿ, ನ.17: ಬಳಕೆದಾರ ವೆಚ್ಚ ಕುರಿತು ದತ್ತಾಂಶವನ್ನು ಮುಚ್ಚಿಡಲಾಗಿದೆ ಎಂಬ ಆರೋಪಗಳ ಕುರಿತಂತೆ ಕೇಂದ್ರವನ್ನು ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಅವರು, ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಪಾಲಿಸುತ್ತಿದೆ ಎಂದು ಟೀಕಿಸಿದ್ದಾರೆ.

ಕುಗ್ಗುತ್ತಿರುವ ಗ್ರಾಮೀಣ ಬೇಡಿಕೆಯಿಂದಾಗಿ ನಾಲ್ಕು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಮೊದಲ ಬಾರಿಗೆ 2017-18ರಲ್ಲಿ ಬಳಕೆದಾರ ವೆಚ್ಚವು ಕುಸಿದಿದೆ ಎನ್ನುವುದನ್ನು ಬೆಟ್ಟು ಮಾಡಿರುವ ರಾಷ್ಟ್ರೀಯ ಅಂಕಿಸಂಖ್ಯೆಗಳ ಕಚೇರಿ (ಎನ್‌ಎಸ್‌ಒ)ಯ ಇತ್ತೀಚಿನ ಬಳಕೆ ವೆಚ್ಚ ಸಮೀಕ್ಷೆಯನ್ನು ಉಲ್ಲೇಖಿಸಿದ್ದ ಮಾಧ್ಯಮ ವರದಿಯೊಂದು,ಎನ್‌ಎಸ್‌ಒ ವರದಿಯನ್ನು ಸ್ವೀಕರಿಸಿರುವ ಸರಕಾರವು ಈ ವರ್ಷದ ಜೂನ್ 19ರಂದು ಅದರ ಬಿಡುಗಡೆಗೆ ಒಪ್ಪಿಕೊಂಡಿತ್ತಾದರೂ ಅದರಲ್ಲಿಯ ಪ್ರತಿಕೂಲ ಅಂಶಗಳಿಂದಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿತ್ತು.

‘ಕಳೆದ ವರ್ಷ ನಿರುದ್ಯೋಗ ಕುರಿತ ಅಂಕಿಅಂಶಗಳನ್ನು ಮುಚ್ಚಿಡಲಾಗಿತ್ತು. ಈಗ ಬಳಕೆದಾರ ವೆಚ್ಚ ಕುರಿತ ಅಂಕಿಅಂಶಗಳನ್ನು ಮುಚ್ಚಿಡಲಾಗಿದೆ. ಇದು ಸರಕಾರವು ಪಾಲಿಸುತ್ತಿರುವ ಆರ್‌ಟಿಐ ಆಗಿದೆ ’ಎಂದು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವಹಿವಾಟು ಆರೋಪಗಳಲ್ಲಿ ಬಂಧನದಲ್ಲಿರುವ ಚಿದಂಬರಂ ರವಿವಾರ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News