ವಿಶೇಷ ಅಭಿಮಾನಿಯನ್ನು ಭೇಟಿಯಾದ ಕೊಹ್ಲಿ

Update: 2019-11-18 14:52 GMT

ಇಂದೋರ್, ನ.17: ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 130 ರನ್‌ಗಳಿಂದ ಗೆದ್ದ ನಂತರ, ಭಿನ್ನ ಸಾಮರ್ಥ್ಯದ ಹುಡುಗಿ ಪೂಜಾ ಶರ್ಮಾ ಅವರನ್ನು ಶನಿವಾರ ಇಲ್ಲಿನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭೇಟಿಯಾದರು.

ಕೊಹ್ಲಿ ಪೂಜಾಗೆ ಹಸ್ತಾಕ್ಷರ ನೀಡಿದ್ದರು ಮತ್ತು ಅವರೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡಿದರು. ಪೂಜಾ ಅವರು ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಪ್ರತಿ ಪಂದ್ಯದಲ್ಲೂ ಅವರನ್ನು ಹುರಿದುಂಬಿಸುವ ಮೂಲಕ ಭಾರತವನ್ನು ಬೆಂಬಲಿಸಲು ಬಯಸುತ್ತಾರೆ. 24ರ ಹರೆಯದ ಪೂಜಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ನ. 22-26ರಂದು ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಭಾರತವು ಎರಡನೇ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News