ಸಹೋದರನ ಕ್ಯಾಚ್ ಪಡೆಯಲು ಹೋಗಿ ಗಾಯಗೊಂಡ ಅಗರ್

Update: 2019-11-17 18:35 GMT

ಅಡಿಲೇಡ್, ನ.17: ಮಾರ್ಷ್ ಒಂಡೇ ಕಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಆ್ಯಸ್ಟನ್ ಅಗರ್ ಅವರು ಸಹೋದರ ವೆಸ್ ಅಗರ್ ಅವರು ನೀಡಿದ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ಚೆಂಡು ಮುಖಕ್ಕೆ ಬಡಿದು ಗಾಯಗೊಂಡಿದ್ದಾರೆ.

ಮಾರ್ಕಸ್ ಸ್ಟೋಯಿನಿಸ್ ಅವರ 41 ನೇ ಓವರ್‌ನ ಮೂರನೇ ಎಸೆತದಲ್ಲಿ ಆ್ಯಸ್ಟನ್ ಅಗರ್ ಅವರು ತನ್ನ ಕಿರಿಯ ಸಹೋದರ ವೆಸ್ ಅಗರ್ ನೀಡಿದ ಕ್ಯಾಚ್‌ಪಡೆಯುವ ಯತ್ನದಲ್ಲಿದ್ದಾಗ ಚೆಂಡು ಅವರ ಹಣೆ ಭಾಗಕ್ಕೆ ಬಡಿದ ಪರಿಣಾಮವಾಗಿ ಅವರು ಗಾಯಗೊಂಡು ಕ್ರೀಡಾಂಗಣದಲ್ಲಿ ಕುಸಿದು ಬಿದ್ದರು. ರವಿವಾರ ಕರೆನ್ ರೋಲ್ಟನ್ ಓವಲ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧದ ಪಶ್ಚಿಮ ಆಸ್ಟ್ರೇಲಿಯಾ ತಂಡಗಳ ನಡುವೆ ಮಾರ್ಷ್ ಏಕದಿನ ಕಪ್ ಹಣಾಹಣಿಯಲ್ಲಿ ಈ ಘಟನೆ ಸಂಭವಿಸಿದೆ.

ಪಶ್ಚಿಮ ಆಸ್ಟ್ರೇಲಿಯಾ ತಂಡದ ಆಟಗಾರ ಆ್ಯಸ್ಟನ್ ಅಗರ್ ಅವರು ಫೀಲ್ಡಿಂಗ್ ವೇಳೆ ಕನ್ನಡಕ ಧರಿಸಿದ್ದರು. ಚೆಂಡು ಬಡಿದ ಪರಿಣಾಮವಾಗಿ ಅವರು ಕನ್ನಡಕ ತುಂಡಾಗಿತ್ತು. ತುಂಡಾದ ಕನ್ನಡಕದ ಚೂರುಗಳು ಅವರ ಮುಖಕ್ಕೆ ಬಡಿದಿದೆ. ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ಆ್ಯಸ್ಟನ್ ಅಗರ್ ಅವರನ್ನು ಸಹ ಆಟಗಾರರು ಧಾವಿಸಿ ಬಂದು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News