ಸಬ್ ರಿಜಿಸ್ಟ್ರಾರ್ ವಂಚನೆ ಪ್ರಕರಣ: ಇಬ್ಬರು ಸ್ಟಾಂಪ್ ವೆಂಡರ್‌ಗಳ ಬಂಧನ

Update: 2019-11-18 17:58 GMT

ಬೆಂಗಳೂರು, ನ.18: ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆಗೂಡಿ ಕೆಲ ಸಬ್ ರಿಜಿಸ್ಟ್ರಾರ್‌ಗಳು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಇಬ್ಬರು ಸ್ಟಾಂಪ್ ವೆಂಡರ್‌ಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಕೆಂಪೇಗೌಡ ಲೇಔಟ್ ನಿವಾಸಿ ಆರ್.ರಂಗಸ್ವಾಮಿ, ಟಿ.ದಾಸರಹಳ್ಳಿಯ ರವೀಂದ್ರ ನಗರ ನಿವಾಸಿ ಕೇಶ್ವಪ್ಪ ಬಂಧಿತ ಆರೋಪಿಗಳೆಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಕೃಷಿ ವಲಯದ ವ್ಯವಸಾಯಕ್ಕಾಗಿ ಹಸಿರು ವಲಯ ಎಂದು ಗುರುತಿಸಿ ಸರಕಾರ ಅಧಿಸೂಚನೆ ಹೊರಡಿಸಿರುವಂತಹ ಕೃಷಿ ಜಮೀನನ್ನು ಅದರ ಮಾಲಕರಿಂದ ಖರೀದಿಸಿದ್ದಾರೆ.

ಬಳಿಕ, ಹಸಿರು ವಲಯಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ, ಜಮೀನುಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಅಕ್ರಮವಾಗಿ ಲೇಔಟ್‌ಗಳನ್ನು ನಿರ್ಮಿಸಿ ನಿವೇಶನಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ದಾಸನಪುರ ಹಾಗೂ ಲಗ್ಗರೆ ಉಪನೋಂದಣಾಧಿಕಾರಿ ಕಚೇರಿ ಬಳಿ ಕೆಲಸ ಮಾಡುವಂತಹ ಸ್ಟಾಂಪ್ ವೆಂಡರ್‌ಗಳ ಮುಖಾಂತರ ಅಕ್ರಮವೆಸಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News