ರಫೇಲ್ ತೀರ್ಪಿನ ಪರಾಮರ್ಶೆಗೆ ನಿರಾಕರಿಸಲು ಸುಪ್ರೀಂಕೋರ್ಟ್ ನೀಡಿದ ಮೂರು ಕಾರಣಗಳು

Update: 2019-11-18 18:41 GMT

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಪರಾಮರ್ಶನಾ ಅರ್ಜಿಗಳಲ್ಲಿ ಯಾವುದೇ ಹುರುಳಿಲ್ಲವೆಂದು ಘೋಷಿಸಿದೆ. ರಫೇಲ್ ಒಪ್ಪಂದದಲ್ಲಿ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿದ ತನ್ನ ಹಿಂದಿನ ತೀರ್ಪನ್ನು ಮರುಪರಾಮರ್ಶಿಸಲು ಸುಪ್ರೀಂಕೋರ್ಟ್ ಯಾಕೆ ನಿರಾಕರಿಸಿತೆಂಬುದಕ್ಕೆ ಮೂರು ಪ್ರಮುಖ ಕಾರಣಗಳನ್ನು ಅದು ಉಲ್ಲೇಖಿಸಿದೆ.

ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಬಹುಕೋಟಿ ರೂ. ಭ್ರಷ್ಟಾಚಾರ ನಡೆದಿದೆಯೆಂಬ ಆರೋಪಗಳ ಕುರಿತ ಕಾನೂನು ವಿಚಾರಣೆಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ಅಂತ್ಯ ಹಾಡಿದೆ. 36 ಫೈಟರ್ ಜೆಟ್ ವಿಮಾನಗಳನ್ನು ಖರೀದಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಮರುಪರಿಶೀಲಿಸಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಪರಾಮರ್ಶನಾ ಅರ್ಜಿಗಳಲ್ಲಿ ಯಾವುದೇ ಹುರುಳಿಲ್ಲವೆಂದು ಘೋಷಿಸಿದೆ. ರಫೇಲ್ ಒಪ್ಪಂದದಲ್ಲಿ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿದ ತನ್ನ ಹಿಂದಿನ ತೀರ್ಪನ್ನು ಮರುಪರಾಮರ್ಶಿಸಲು ಸುಪ್ರೀಂಕೋರ್ಟ್ ಯಾಕೆ ನಿರಾಕರಿಸಿತೆಂಬುದಕ್ಕೆ ಮೂರು ಪ್ರಮುಖ ಕಾರಣಗಳನ್ನು ಅದು ಉಲ್ಲೇಖಿಸಿದೆ.

ರಫೇಲ್ ಹಗರಣದಲ್ಲಿ ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿ ಸುಪ್ರೀಂಕೋರ್ಟ್ 2018ರ ಡಿಸೆಂಬರ್‌ನಲ್ಲಿ ನೀಡಿದ ತೀರ್ಪು, ಕೆಲವು ನಿರ್ಣಾಯಕವಾದ ಸುಳ್ಳು ಹೇಳಿಕೆಗಳನ್ನು ಆಧರಿಸಿತ್ತೆಂದು ಕೆಲವು ಅರ್ಜಿದಾರರ ವಾದವಾಗಿತ್ತು.

ಅರ್ಜಿದಾರರಾದ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಹಾಗೂ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಪರಾಮರ್ಶನಾ ಅರ್ಜಿಯಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ಅಧಿಕಾರಿಗಳು ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಉದ್ದೇಶದಿಂದಲೇ ಸುಳ್ಳು ಹೇಳಿಕೆಗಳನ್ನು ನೀಡಿದ್ದರು.

ಆದಾಗ್ಯೂ, ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಸಿಎಜಿ ವರದಿ ಕುರಿತಾಗಿ ಕೇಂದ್ರ ಸರಕಾರದ ಕಡೆಯಿಂದ ಆಗಿರುವ ಪ್ರಮಾದಗಳನ್ನು ಸರಿಪಡಿಸಲಾಗಿದೆ ಹಾಗೂ ಅಂಬಾನಿ ಸಹೋದರರಲ್ಲೊಬ್ಬರ ಹೆಸರನ್ನು ತಪ್ಪಾಗಿ ಉಲ್ಲೇಖಿಸಿರುವ ತೀರ್ಪಿನ ಮೇಲೆ ಯಾವುದೇ ಪರಿಣಾಮವಾಗಲಾರದು ಎಂದವರು ಹೇಳಿದ್ದಾರೆ.

ತನ್ನ ಹಿಂದಿನ ತೀರ್ಪನ್ನು ಮರುಪರಿಶೀಲಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ ಅಂತಿಮವಾಗಿ ಏಕೆ ತೀರ್ಮಾನಿಸಿತು? ಅಂತರ್ಜಾಲ ಸುದ್ದಿತಾಣ ವೈರ್ ತನ್ನ ವರದಿಯೊಂದರಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದೆ.

ತೀರ್ಪಿನಲ್ಲಿನ ದೋಷಗಳು ಮತ್ತು ನ್ಯೂನತೆಗಳು?

ಡಿಸೆಂಬರ್ 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ನಿರ್ಣಾಯಕವಾದ ಬೆರಳೆಣಿಕೆಯಷ್ಟು ಸುಳ್ಳು ಹೇಳಿಕೆಗಳನ್ನು ಆಧರಿಸಿದೆ ಎಂದು ಕೆಲವು ಅರ್ಜಿದಾರರು ವಾದ ಮಂಡಿಸಿದ್ದರು. ನ್ಯಾಯಾಲಯವನ್ನು ದಾರಿತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ಕೆಲವು ತಪ್ಪುಮಾಹಿತಿಗಳನ್ನು ಮಂಡಿಸಿದ್ದಾರೆ ಎಂದು ಅರ್ಜಿದಾರರಾದ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಮತ್ತು ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಪರಿಶೀಲನಾ ಅರ್ಜಿಯಲ್ಲಿ ಆರೋಪಿಸಿದ್ದರು. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿ ಇಲ್ಲದಿರುವುದು ಹಾಗೂ ಈ ಒಪ್ಪಂದದಲ್ಲಿ ಭಾಗಿಯಾದ ಅನಿಲ್ ಅಂಬಾನಿಯವರ ಸಂಸ್ಥೆಯ ಹೆಸರನ್ನು ಅವರ ಸಹೋದರನ ಸಂಸ್ಥೆಯ ಹೆಸರಿನೊಂದಿಗೆ ತಪ್ಪಾಗಿ ಉಲ್ಲೇಖಿಸಿರುವುದು ಸೇರಿದಂತೆ ಕೆಲವು ಪ್ರಮಾದಗಳನ್ನು ಅವರು ಒತ್ತಿ ಹೇಳಿದ್ದರು.

ಈ ವಿಷಯದಲ್ಲಿ, ಈ ನ್ಯಾಯಾಲಯವು 2012 ರ ಹಿಂದಿನ ಪೋಷಕ ರಿಲಯನ್ಸ್ ಕಂಪೆನಿ ಮತ್ತು ರಫೇಲ್ ಯುದ್ಧ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್ ನಡುವೆ ಹೊಂದಾಣಿಕೆ ಇದೆಯೆಂಬ ತಪ್ಪು ಅಭಿಪ್ರಾಯಕ್ಕೆ ಸಿಲುಕಿದೆ ಎನ್ನುವ ಅರ್ಜಿದಾರರ ವಾದದಲ್ಲಿ ಸಾಕಷ್ಟು ಹುರುಳಿದೆ. ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನಿಂದ ಸಂಪೂರ್ಣವಾಗಿ ವಿಭಿನ್ನವಾದ ಕಾರ್ಪೊರೇಟ್ ಸಂಸ್ಥೆಯಾಗಿದೆ. ಅರ್ಜಿದಾರರ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಅದಗ್ ಲಿಮಿಟೆಡ್ (ಆರ್‌ಎಎಲ್)ನ ಮೂಲ ಕಂಪೆನಿಯಾಗಿದೆ.

ರಫೇಲ್ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಬದಲಾವಣೆಯಾಗಿದೆಯೇ ಅಥವಾ ಇಲ್ಲವೇ?

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿದ್ದ ಅರ್ಜಿದಾರರು ಗಮನಿಸಿದಂತೆ, ಸುಪ್ರೀಂ ಕೋರ್ಟ್ 2018ರ ಡಿಸೆಂಬರ್‌ನಲ್ಲಿ ನೀಡಿದ ತೀರ್ಪು ಮೂರು ಪ್ರಾಥಮಿಕ ಅಂಶಗಳಿಂದ ಕೂಡಿದ ಒಪ್ಪಂದವನ್ನು ಪರಿಶೀಲಿಸಿತ್ತು ಮತ್ತು ರಫೇಲ್ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಬದಲಾವಣೆಗಳನ್ನು ನಿರ್ಲಕ್ಷಿಸಿತ್ತು.

 ರಫೇಲ್ ಒಪ್ಪಂದದಲ್ಲಿ ಖಾತರಿಯ ಕೊರತೆ, ಮಾನದಂಡದ ಬೆಲೆಯಲ್ಲಿನ ಬದಲಾವಣೆಗಳು ಮತ್ತು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಅನ್ನು ಒಪ್ಪಂದದಿಂದ ಕೈಬಿಟ್ಟ ರೀತಿ ಮತ್ತು ರಿಲಯನ್ಸ್ ಏರೋಸ್ಟ್ರಕ್ಚರ್ ಅನ್ನು ಅಫ್ಸೆಟ್ ಪಾಲುದಾರನಾಗಿ ಆಯ್ಕೆ ಮಾಡಿರುವ ಬಗ್ಗೆ ತನಿಖೆಯಾಗಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು.

ಪರಿಶೀಲನಾ ಅರ್ಜಿಗಳಲ್ಲಿ ಪ್ರಸ್ತಾವಿಸಿರುವ ವಿಷಯಗಳ ಬಗ್ಗೆ ತನ್ನ ತಕರಾರಿಲ್ಲ ಎಂದು ನ್ಯಾಯಾಲಯವು ಒಪ್ಪಿಕೊಂಡಿದೆ, ಆದರೆ ರಫೇಲ್ ಒಪ್ಪಂದದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರಿಂದ, ಅದು ತಪ್ಪುಮಾಡಿದೆಯೆಂಬುದನ್ನು ಸೂಚಿಸುವುದಿಲ್ಲ ಎಂದು ಹೇಳುತ್ತದೆ. ಈ ಪರಿಶೀಲನಾ ಹಂತದಲ್ಲಿ ಹೊಸ ಮಾಹಿತಿಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲ ಎಂದು ತೀರ್ಪು ಹೇಳುತ್ತದೆ.

‘‘ರಫೇಲ್ ಒಪ್ಪಂದದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ದಾಖಲೆಗಳು ವಿರೋಧಾಭಾಸಗಳಿಂದ ಕೂಡಿವೆ ಎಂದು ಅರ್ಜಿದಾರರು ವಾದಿಸಲು ಪ್ರಯತ್ನಿಸಿದರು. ಹೇಗಾದರೂ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಸ್ಸಂದೇಹವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ, ಅದು ತೆಗೆದುಕೊಂಡ ನಿರ್ಧಾರಕ್ಕಿಂತ ಭಿನ್ನವಾಗಿರಬಹುದು, ಆದರೆ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಚರ್ಚೆಗಳು ಮತ್ತು ತಜ್ಞರ ಅಭಿಪ್ರಾಯವನ್ನು ರೂಪಿಸುತ್ತದೆ ಹಾಗೂ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ನಿರ್ಧಾರವು ಅಧಿಕೃತ ಪ್ರಾಧಿಕಾರದ ಬಳಿಯೇ ಇರುತ್ತದೆ. ಹಾಗೆಯೇ ಅದು ಅದನ್ನು ಬಳಸಿಕೊಂಡಿತು’’ ಎಂದು ನ್ಯಾಯಮೂರ್ತಿ ಎಸ್.ಕೆ. ಕೌಲ್, ತೀರ್ಪಿನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಲೆನಿಗದಿ ಹಾಗೂ ಸಿಬಿಐನಲ್ಲಿ ಎಫ್‌ಐಆರ್ ದಾಖಲು

 ರಫೇಲ್ ಒಪ್ಪಂದವನ್ನು ನ್ಯಾಯಾಂಗವು ಅಕಾಲಿಕವಾಗಿ ಪರಿಶೀಲಿಸಿದೆ ಮತ್ತು ಸಿಬಿಐ ತನಿಖೆ ನಡೆದಿದ್ದರೆ, ಇನ್ನೂ ಹೆಚ್ಚಿನ ಸಂಗತಿಗಳು ಬಹಿರಂಗವಾಗಿ ಹೊರಬರಬಹುದು ಎಂಬ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಆದರೆ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ಪ್ರತ್ಯೇಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದನ್ನು ಸಿಬಿಐ ತನಿಖೆಗೆ ಆದೇಶಿಸುವಷ್ಟು ಸಮರ್ಥನೀಯವೆಂದು ತಾವು ರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಅರ್ಜಿದಾರರ ಪರವಾಗಿ ನಿರ್ಧಾರವನ್ನು ಸಮರ್ಥಿಸಲು ಇರಿಸಲಾಗಿರುವ ವಿಷಯದಿಂದ ತೃಪ್ತಿ ಹೊಂದಿಲ್ಲ ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅಭಿಪ್ರಾಯಿಸಿದ್ದಾರೆ, ಆದರೆ ಕಾನೂನಿನಡಿಯಲ್ಲಿ ಪ್ರಕರಣದ ತನಿಖೆ ನಡೆಸಲು ಅಧಿಕಾರಿಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲವೆಂದು ಅವರು ಹೇಳಿದ್ದಾರೆ.

‘‘ಬೆಲೆಗಳನ್ನು ನಿರ್ಧರಿಸುವುದಾಗಲಿ ಅಥವಾ ಆ ವಿಷಯಕ್ಕಾಗಿ ನ್ಯಾಯಾಲಯವನ್ನು ಸಮೀಪಿಸಲು ನಿರ್ಧರಿಸುವ ವ್ಯಕ್ತಿಗಳಿಗೆ ಬೆಲೆ ನಿರ್ಧಾರದ ಬಗ್ಗೆ ಸಂದೇಹವಿದೆಯೆಂಬ ಮಾತ್ರಕ್ಕೆ ಅಂತಹ ಅಂಶಗಳನ್ನು ನಿರ್ವಹಿಸುವುದಾಗಲಿ ನ್ಯಾಯಾಲಯದ ಕೆಲಸವಲ್ಲ. ಅಂತಹ ಬೆಲೆಗಳ ಆಂತರಿಕ ಕಾರ್ಯವಿಧಾನವು ಪರಿಸ್ಥಿತಿಯನ್ನು ನೋಡಿಕೊಳ್ಳುತ್ತದೆ. ದಾಖಲೆಗಳ ಪರಿಶೀಲನೆಯಲ್ಲಿ ನಾವು ವಿಮಾನದ ಖರೀದಿಯನ್ನು ಸೇಬು ಮತ್ತು ಕಿತ್ತಳೆಯ ಖರೀದಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, ಮೂಲ ವಿಮಾನದ ಬೆಲೆಯನ್ನು ಹೋಲಿಸಬೇಕಾಗಿರುತ್ತದೆ. ಅದು ಸ್ಪರ್ಧಾತ್ಮಕವಾಗಿ ಕಡಿಮೆ ಇತ್ತು. ವಿಮಾನದಲ್ಲಿ ಯಾವುದನ್ನು ಲೋಡ್ ಮಾಡಬೇಕು ಅಥವಾ ಇಲ್ಲ ಮತ್ತು ಹೆಚ್ಚಿನ ಬೆಲೆಗಳನ್ನು ಸೇರಿಸಬೇಕೆಂಬುದನ್ನು ಸಮರ್ಥ ಅಧಿಕಾರಿಗಳ ಅತ್ಯುತ್ತಮ ತೀರ್ಪಿಗೆ ಬಿಡಬೇಕಾಗಿದೆ’’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

Writer - ಕೃಪೆ: thewire

contributor

Editor - ಕೃಪೆ: thewire

contributor

Similar News