ಆಂಧ್ರಪ್ರದೇಶ: ಜೆರುಸಲೇಂ ಯಾತ್ರಿಕರಿಗೆ ಆರ್ಥಿಕ ನೆರವು ಹೆಚ್ಚಳ

Update: 2019-11-19 15:43 GMT
ಫೈಲ್ ಚಿತ್ರ

ಅಮರಾವತಿ, ನ.19: ಜೆರುಸಲೇಂ ಹಾಗೂ ಇತರ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಕ್ರೈಸ್ತ ಯಾತ್ರಿಕರಿಗೆ ಸಹಾಯ ಧನವನ್ನು ಹೆಚ್ಚಿಸಲು ಆಂಧ್ರಪ್ರದೇಶ ಸರಕಾರ ನಿರ್ಧರಿಸಿದೆ.

 ಜೆರುಸಲೇಂ, ಬೆಥ್ಲಹೇಂ, ನಝರೆಥ್, ಡೆಡ್ ಸೀ(ಮೃತ ಸಮುದ್ರ), ಸೀ ಆಫ್ ಗೆಲಿಲೀ , ಜೋರ್ಡಾನ್ ನದಿಗೆ ಯಾತ್ರೆ ತೆರಳುವ, ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆಯಿರುವ ಯಾತ್ರಿಕರಿಗೆ ನೀಡುವ ಸಹಾಯಧವನ್ನು 40,000 ರೂ.ನಿಂದ 60,000 ರೂ.ಗೆ ಹೆಚ್ಚಿಸಲಾಗಿದೆ ಎಂದು ಸರಕಾರ ತಿಳಿಸಿದೆ.

3 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವಿರುವ ಕ್ರಿಶ್ಚಿಯನ್ ಯಾತ್ರಿಕರಿಗೆ ನೀಡಲಾಗುವ ಸಹಾಯಧನವನ್ನು 20,000 ರೂ.ನಿಂದ 30,000 ರೂ.ಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು 2013ರಲ್ಲಿ ಅವಿಭಜಿತ ಆಂಧ್ರಪ್ರದೇಶ ಸರಕಾರ ಆರಂಭಿಸಿದ್ದು ಆರಂಭದಲ್ಲಿ 20,000 ರೂ. ಸಹಾಯಧನ ನೀಡಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News