ಓಕ್ಲಹಾಮದಲ್ಲಿ ಗುಂಡು ಹಾರಾಟ: ಮೂವರು ಸಾವು

Update: 2019-11-19 16:37 GMT

ವಾಶಿಂಗ್ಟನ್, ನ. 19: ಅಮೆರಿಕದ ಓಕ್ಲಹಾಮ ರಾಜ್ಯದ ವಾಲ್‌ಮಾರ್ಟ್ ಅಂಗಡಿಯೊಂದರ ಹೊರಗೆ ಸೋಮವಾರ ಬೆಳಗ್ಗೆ ನಡೆದ ಗುಂಡು ಹಾರಾಟದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮೃತರಲ್ಲಿ ಹಂತಕನೂ ಸೇರಿದ್ದಾನೆ.

ಗೃಹ ಕಲಹದಿಂದಾಗಿ ಗುಂಡು ಹಾರಾಟದ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ಡಂಕನ್ ಪಟ್ಟಣದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಅಂಗಡಿಯ ಎದುರಿನಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಘಟನೆ ಸಂಭವಿಸಿದೆ.

ಬಂದೂಕುಧಾರಿಯು ಕಾರಿನಲ್ಲಿದ್ದ ಓರ್ವ ಪುರುಷ ಮತ್ತು ಮಹಿಳೆಯ ಮೇಲೆ ಗುಂಡು ಹಾರಿಸಿ ಕೊಂದನು ಹಾಗೂ ಬಳಿಕ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News