ಅಸಾಂಜ್ ವಿರುದ್ಧ ಅತ್ಯಾಚಾರ ತನಿಖೆ ಕೈಬಿಟ್ಟ ಸ್ವೀಡನ್

Update: 2019-11-19 17:04 GMT

ಸ್ಟಾಕ್‌ಹೋಮ್ (ಸ್ವೀಡನ್), ನ. 19: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧ 2010ರಲ್ಲಿ ದಾಖಲಾಗಿರುವ ಅತ್ಯಾಚಾರ ಆರೋಪದ ತನಿಖೆಯನ್ನು ಕೈಬಿಟ್ಟಿರುವುದಾಗಿ ಸ್ವೀಡನ್‌ನ ಪ್ರಾಸಿಕ್ಯೂಟರ್‌ಗಳು ಮಂಗಳವಾರ ಹೇಳಿದ್ದಾರೆ. ಆದರೆ, ದೂರುದಾರರ ಆರೋಪವು ‘ವಿಶ್ವಾಸಾರ್ಹವಾಗಿದೆ’ ಎಂದು ಅವರು ಹೇಳಿದ್ದಾರೆ.

‘‘ಪ್ರಕರಣದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ತನಿಖಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಪುರಾವೆಯು ದೋಷಾರೋಪವನ್ನು ಹೊರಿಸುವಷ್ಟು ಪ್ರಬಲವಾಗಿಲ್ಲ’’ ಎಂದು ಉಪ ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ದೇಶಕಿ ಎವಾ ಮೇರೀ ಪರ್ಸನ್ ಸುದ್ದಿಗಾರರಿಗೆ ತಿಳಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News