ಜಿದ್ದಾ: 'ವಿಂಟರ್ ಕ್ರಿಕೆಟ್ ಟ್ರೋಫಿ 2019' ಪ್ಯಾರಾಮೌನ್ಟ್ ತಂಡ ಚಾಂಪಿಯನ್

Update: 2019-11-20 06:05 GMT

ಜಿದ್ದಾ :  ಟಾರ್ಗೆಟ್ ಗಾಯಿಸ್ ಜಿದ್ದಾ ಇದರ ವತಿಯಿಂದ ಇತ್ತೀಚೆಗೆ ಜಿದ್ದಾದಲ್ಲಿ ನಡೆದ ವಿಂಟರ್ ಟ್ರೋಫಿ - 2019 ಪಂದ್ಯಾವಳಿಯಲ್ಲಿ ದಾವೂದ್ ಉಚ್ಚಿಲ ಮಾಲಕತ್ವದ ಪ್ಯಾರಮೌನ್ಟ್ ರಿಯಾದ್ ತಂಡ ಚ್ಯಾಂಪಿಯನ್ ಶಿಪ್ ಗೆದ್ದುಕೊಂಡಿದೆ. ಯಂಗ್ ಸ್ಟಾರ್ ಜಿದ್ದಾ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿದೆ.

ಸೆಮಿಫೈನಲ್ ನಲ್ಲಿ ಎಟಿಎಸ್ ಜಿದ್ದಾ ತಂಡವನ್ನು ಸೋಲಿಸಿ ಫೈನಲ್ ತಲುಪಿದ ಪ್ಯಾರಾಮೌಂಟ್ ರಿಯಾದ್ ತಂಡ  ಎದುರಾಳಿ ಯಂಗ್ ಸ್ಟಾರ್  ತಂಡ  ನೀಡಿದ 76 ರನ್ ಗಳ ಸವಾಲನ್ನು 6.2 ಓವರ್ ಗಳಲ್ಲಿ ಪೂರೈಸಿ ಗೆದ್ದುಕೊಂಡಿತು.

ಯಂಗ್ ಸ್ಟಾರ್ ತಂಡವು ಸೆಮಿಫ಼ೈನಲ್ ನಲ್ಲಿ ಗ್ಲಾಡಿಯೇಟರ್ಸ್ ತಂಡವನ್ನು ಸೋಲಿಸಿ ಫೈನಲ್ ಹಂತವನ್ನು ತಲುಪಿತ್ತು. 8 ಓವರ್‌ಗಳ ಫೈನಲ್ ಪಂದ್ಯದಲ್ಲಿ ಇಲ್ಯಾಸ್ ಮೂಳೂರು ಮತ್ತು ಮುಸ್ತಫಾ ಹಾಸನ ಶ್ರೇಷ್ಠ ಬ್ಯಾಟಿಂಗ್ ನಿರ್ವಹಣೆ ಯನ್ನು ಪ್ರದರ್ಶಿಸಿ ತಂಡಕ್ಕೆ ಬೆನ್ನೆಲುಬಾದರು. ಫೈನಲ್ ನಲ್ಲಿ ತೋರಿದ ತನ್ನ ಅಮೋಘ ಆಟಕ್ಕಾಗಿ ಮುಸ್ತಫಾ ಹಾಸನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು ಮತ್ತು ಸರಣಿಯುದ್ದಕ್ಕೂ ತೋರಿದ ಉತ್ತಮ ನಿರ್ವಹಣೆಯಿಂದಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು.

ಯಂಗ್ ಸ್ಟಾರ್ ತಂಡದ ಅಮೀರ್ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಪ್ಯಾರಮೌನ್ಟ್ ತಂಡದ ಹರ್ಶದ್ ಉತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News