"ಅಂಧನಾಗಿದ್ದರೆ ಪ್ರತಿಭಟನೆಗೇಕೆ ಬಂದಿರುವೆ ?"

Update: 2019-11-20 07:49 GMT

ಹೊಸದಿಲ್ಲಿ: ಅಂಧನಾಗಿದ್ದರೆ ಪ್ರತಿಭಟನೆಗೇಕೆ ಬಂದಿರುವೆ ಎಂದು ಪೊಲೀಸರು ತನ್ನನ್ನು ಕೇಳಿದರೆಂದು ಸೋಮವಾರ ಜೆಎನ್‍ಯು ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರಿಂದ ಲಾಟಿ ಚಾರ್ಜ್‍ಗೊಳಗಾದ ಅಂಧ ವಿದ್ಯಾರ್ಥಿ ಶಶಿ ಭೂಷಣ್ ಪಾಂಡೆ ಹೇಳಿದ್ದಾರೆ.

ಪಾಂಡೆ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯವನ್ನು 'ನ್ಯಾಷನಲ್ ಪ್ಲಾಟ್‍ಫಾರ್ಮ್ ಫಾರ್ ದಿ ರೈಟ್ಸ್ ಆಫ್ ದಿ ಡಿಸೇಬಲ್ಡ್'  ಹಾಗೂ ಜೆಎನ್‍ಯು ಅಂಧ ವಿದ್ಯಾರ್ಥಿಗಳ ಯೂನಿಯನ್ ಖಂಡಿಸಿವೆ.

"ಎಲ್ಲಾ ವಿದ್ಯಾರ್ಥಿಗಳು ಹೊರನಡೆಯುತ್ತಿರುವಾಗ, ಬೀದಿ ದೀಪಗಳನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಯಾರೋ ಹೇಳಿದರು. ಕೆಲ ಸ್ನೇಹಿತರು ನನ್ನನ್ನು ಒಂದು ಬದಿಗೆ ಸರಿಸಿ ನಿಲ್ಲಿಸಿದರು. ನಾನು ಅಲ್ಲಿ ಸುರಕ್ಷಿತ ಎಂದು ಅವರು ಅಂದುಕೊಂಡಿದ್ದರು ಆದರೆ ಹಾಗಾಗಿಲ್ಲ,'' ಎಂದು ಜೆಎನ್‍ಯು ಕ್ಯಾಂಪಸ್ಸಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

"ನನಗೆ ಲಾಠಿಯಲ್ಲಿ ಹೊಡೆದರು, ನಾನು ದೃಷ್ಟಿಹೀನ ಎಂದಾಗ, ಅಂಧನಾಗಿದ್ದರೆ ಪ್ರತಿಭಟನೆಗೇಕೆ ಬಂದಿದ್ದಿ ಎಂದು ಅಧಿಕಾರಿಯೊಬ್ಬರು ಹೇಳಿದರು ಹಾಗೂ ಪೊಲೀಸರು ತನ್ನನ್ನು ತುಳಿದರು" ಎಂದು ಪಾಂಡೆ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News