ಖುಲಾಸೆ ಪ್ರಕರಣಗಳನ್ನು ಪರಾಮರ್ಶೆ ಮಾಡದ ಬಗ್ಗೆ ಸಮರ್ಥನೆ ನೀಡಿ: ಹೈಕೋರ್ಟ್

Update: 2019-11-20 15:40 GMT

ಬೆಂಗಳೂರು, ನ.20: ವಿಶೇಷ ಕಾಯ್ದೆಯಡಿ ಖುಲಾಸೆ ಆಗಿರುವ ಪ್ರಕರಣಗಳನ್ನು ಪರಾಮರ್ಶೆ ಮಾಡುವುದಿಲ್ಲ ಎಂಬ ಹೇಳಿಕೆ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮರ್ಥನೆ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಪ್ರಕರಣಗಳು ಯಾಕೆ ಖುಲಾಸೆಗೊಂಡವು ಎಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ನಿರ್ಲಕ್ಷದಿಂದ ಪ್ರಕರಣಗಳು ಖುಲಾಸೆಯಾಗಿದ್ದರೆ ಅಂತಹ ಪೊಲೀಸರ ಹಾಗೂ ಸರಕಾರಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಆದರೆ, ಸರಕಾರವೇ ಇಲ್ಲಿ ಖುಲಾಸೆ ಆಗಿರುವ ಪ್ರಕರಣಗಳನ್ನು ಪರಾಮರ್ಶೆ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದೆ. ಹೀಗಾಗಿ, ಮುಂದಿನ ವಿಚಾರಣೆ ವೇಳೆ ಈ ಬಗೆ ಸಮರ್ಥನೆ ನೀಡಬೇಕೆಂದು ನ್ಯಾಯಪೀಠವು ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

2014ರ ಜ.7ರಂದು ಸುಪ್ರೀಂಕೋರ್ಟ್ ಖುಲಾಸೆಗೊಂಡ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಿಂದ ಹೊರಬಿದ್ದ ತೀರ್ಪು ಪರಿಶೀಲಿಸಲು ಹಾಗೂ ಪ್ರಾಸಿಕ್ಯೂಷನ್ ಹಂತದಲ್ಲಿ ವೈಫಲ್ಯಗಳು ಕಂಡು ಬಂದಿವೆಯೇ ಎಂಬ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರನ್ನು ಗುರುತಿಸಿ ಅವರ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯಗಳು ಪೊಲೀಸ್ ಇಲಾಖೆ ಹಾಗೂ ಪ್ರಾಸಿಕ್ಯೂಷನ್ ಇಲಾಖೆ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕೆಂದು ಎಂದು ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News