ಖಾಸಗಿ ಕಂಪೆನಿಯ ಸಾಫ್ಟ್‌ವೇರ್ ಹ್ಯಾಕ್: ಆರೋಪಿಯ ಬಂಧನ

Update: 2019-11-20 15:49 GMT

ಬೆಂಗಳೂರು, ನ.20: ಬೆಲ್ ಟಿಪಿಒ ಕಂಪೆನಿಯ ಸಾಫ್ಟ್‌ವೇರ್ ಹ್ಯಾಕ್ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಇಲ್ಲಿನ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಮುತ್ತುವೇಲು ಯಾನೆ ಪವಿತ್ರಸಿಂಹ(36) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ನಿವಾಸಿ ವಿನೋದ್ ಬೆಲ್ಲಾಂಕೊಂಡ ಎಂಬುವರು, ಬೆಲ್ ಟಿಪಿಒ ಹೆಸರಿನ ಸಾಫ್ಟ್‌ವೇರ್ ಕಂಪೆನಿ ನಡೆಸುತ್ತಿದ್ದರು. ಆದರೆ, ಕಂಪೆನಿಯೂ ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್ ಅನ್ನು ಆರೋಪಿ ಮುತ್ತುವೇಲು ಹ್ಯಾಕ್ ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಎಂದು ಆರೋಪಿಸಿ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರಿನ ಅನ್ವಯ, ಐಟಿ ಆಕ್ಟ್ ಅಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ ಲ್ಯಾಪ್ ಟ್ಯಾಪ್, ಮೊಬೈಲ್ ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News