ನ.26ರಿಂದ ಬೆಂಗೂರು-ಬೀದರ್ ಸಂವಿಧಾನಕ್ಕಾಗಿ ಯಾತ್ರೆ

Update: 2019-11-20 18:01 GMT

ಬೆಂಗಳೂರು, ನ.20: ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನಕ್ಕಾಗಿ ಯಾತ್ರೆ ಎಂಬ ವಿನೂತನ ಕಾರ್ಯಕ್ರಮವನು ಸೈಕಲ್ ಮೂಲಕ ಬೆಂಗಳೂರಿನಿಂದ- ಬೀದರ್‌ವರೆಗೆ ನ.26 ರಿಂದ ಡಿ.10ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಗಲ್ಸ ಸಂಸ್ಥೆಯ ಮುಖ್ಯಸ್ಥೆ ಕವಿತಾ ರೆಡ್ಡಿ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.26 ರಂದು ಈ ಯಾತ್ರೆಯು ಬೆಂಗಳೂರಿನಿಂದ ಆರಂಭಗೊಂಡು ದಾಸನಾಪುರ, ಸಿದ್ದಗಂಗಾ ಮಠ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಒಟ್ಟು 16 ದಿನಗಳ ಕಾಲ 700 ಕಿ.ಮೀ ಕ್ರಮಿಸಿ, ಡಿ.10ರಂದು ಬೀದರ್ ತಲುಪಲಿದೆ ಎಂದು ತಿಳಿಸಿದರು.

ಯಾತ್ರೆಯು ನ.26 ರಂದು ನಗರದ ಎಚ್.ಎಸ್.ಆರ್ ಲೇಔಟ್‌ನ ಸ್ವಾಭಿಮಾನ ಟ್ರೀಪಾರ್ಕ್‌ನಿಂದ ಆರಂಭವಾಗಲಿದ್ದು, ವಾಕ್ ರನ್ ಸೈಕಲ್ ಮೂಲಕ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಸಂವಿಧಾನದ ಆಶಯಗಳ ಬಗ್ಗೆ, ಶಾಲೆ ಕಾಲೇಜುಗಳು ಹಾಗೂ ಸ್ವಸಹಾಯ ಸಂಘಗಳೊಂದಿಗೆ ಸಂವಾದ, ಸಸಿ ನೆಡುವ ಕಾರ್ಯಕ್ರಮ, ದಾನಿಗಳು ನೀಡಿದ ನೋಟ್ ಪುಸ್ತಕಗಳ ವಿತರಣೆ, ಕೆರೆ ನೀರು ಸಂರಕ್ಷಣೆ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಜನ ಜಾಗೃತಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News