ಬಿಬಿಎಂಪಿ: 25 ಮಂದಿ ಇಂಜಿನಿಯರ್‌ಗಳು ಸಸ್ಪೆಂಡ್

Update: 2019-11-20 18:06 GMT

ಬೆಂಗಳೂರು, ನ.20: ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಮಲ್ಲೇಶ್ವರಂ, ಗಾಂಧಿನಗರ, ಆರ್.ಆರ್. ನಗರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾಗಿದ್ದ 25 ಮಂದಿ ಇಂಜಿನಿಯರ್‌ಗಳನ್ನು ಪಾಲಿಕೆ ಸೇವೆಯಿಂದ ಮುಕ್ತಿಗೊಳಿಸಲಾಗಿದೆ.

ಈ ಮೂರು ಕ್ಷೇತ್ರಗಳಲ್ಲಿ ಭಾರೀ ಅಕ್ರಮ ನಡೆದಿರುವುದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಅನಿಲ್ಕುಮಾರ್ 25 ಮಂದಿ ಇಂಜಿನಿಯರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪಿಡಬ್ಲ್ಯೂಡಿ ಮಾತೃ ಇಲಾಖೆಯಿಂದ ಪಾಲಿಕೆಗೆ ಎರವಲು ಸೇವೆ ಮೇಲೆ ಬಂದು ಕಾರ್ಯನಿರ್ವಹಿಸುತ್ತಿದ್ದ ಶಿರಾಮೇಗೌಡ, ಎನ್.ಆರ್. ಮಹೇಶ್, ಧರ್ಮರಾಜ್ ಜಿ. ನಾಯಕ್, ಎಚ್.ಪಿ. ನಾಗರಾಜು, ಎಂ.ಜೆ.ಸಿದ್ದಿಕ್, ಪಿ.ರಾಮರಾವ್, ರವೀಂದ್ರನಾಥ್, ಎಂ.ಕೃಷ್ಣ, ಪಿ.ರವಿರಾಜ್, ಜಿ.ಎಲ್. ಕೇಶವಮೂರ್ತಿ, ಎಲ್.ರಘು, ಹರೀಶ್ ಎಂ.ಕೆ., ಚನ್ನವೀರಯ್ಯ, ಎಂ.ಎನ್. ಕಿಶೋರ್, ಎಚ್.ಕೆ. ಶ್ರೀನಿವಾಸ್, ಡಿ.ಎಸ್. ದೇವರಾಜ್, ಎಂ.ಬಿ. ಜಯಕುಮಾರ್, ಉದಯಶಂಕರ್, ದೇವರಾಜು, ಜಯಲಿಂಗಪ್ಪ, ಕೆ.ಬಿ. ನರಸಿಂಹಮೂರ್ತಿ, ಕೆ.ಪಿ.ಯೋಗೇಶ್, ಕದಿರಿಪತಿ ಎಂ.ಬಿ. ನಾಗರಾಜ್ ಮತ್ತು ಎಂ.ಜೆ ಕುಮಾರ್ ಅವರುಗಳನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News