ಗೋಡೆಗಳ ಮೇಲೆ ಅಶ್ಲೀಲ ಪದಗಳು ಬರೆದ ಆರೋಪ: ಇಬ್ಬರು ಪದವೀಧರರ ಬಂಧನ

Update: 2019-11-21 16:30 GMT

ಬೆಂಗಳೂರು, ನ.21: ಸಾರ್ವಜನಿಕ ಸ್ಥಳಗಳಲ್ಲಿರುವ ಖಾಲಿ ಗೋಡೆಗಳ ಮೇಲೆ ಮುಜುಗರ ಪಡುವ ರೀತಿಯಲ್ಲಿ ಕೆಟ್ಟ ಪದಗಳನ್ನು ಬರೆದ ಆರೋಪದಡಿ ಇಬ್ಬರು ಪದವೀಧರರನ್ನು ಇಲ್ಲಿನ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಂಪುರ ನಿವಾಸಿಗಳು ಬಂಧಿತ ಪದವೀಧರರಾಗಿದ್ದು, ಇವರ ಹೆಸರುಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ ಎಂದು ತಿಳಿದುಬಂದಿದೆ.

ಕೆಲ ಸಾರ್ವಜನಿಕ ಮತ್ತು ಖಾಸಗಿ ವ್ಯಕ್ತಿಗಳಿಗೆ ಸೇರಿದ ಖಾಲೆ ಗೋಡೆಗಳ ಮೇಲೆ ಮುಜುಗರ ಪಡುವ ರೀತಿಯಲ್ಲಿ ಕೆಟ್ಟ ಪದಗಳನ್ನು ಬರೆದು, ಸ್ವಚ್ಛತೆ ಹಾಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು.

ಈ ಸಂಬಂಧ ಕಾರ್ಯಾಚರಣೆ ನಡೆಸಿರುವ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಮತ್ತಷ್ಟು ಆರೋಪಿಗಳ ಕೈವಾಡವಿದ್ದು, ತನಿಖೆ ಚುರುಕುಗೊಳಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News