ಐಎಂಎ, ಆ್ಯಂಬಿಡೆಂಟ್ ವಂಚನೆ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

Update: 2019-11-22 16:54 GMT

ಬೆಂಗಳೂರು, ನ.22: ಐಎಂಎ, ಆ್ಯಂಬಿಡೆಂಟ್ ಹಾಗೂ ಇಂಜಾಜ್ ಕಂಪೆನಿಗಳಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠವು ಬೇರೊಂದು ಪೀಠಕ್ಕೆ ವರ್ಗಾಯಿಸುವ ನಿಲುವನ್ನು ಕೈಗೊಂಡಿತು.

ಈ ಕುರಿತು ಚಿತ್ರದುರ್ಗ ನಿವಾಸಿ ಮುಹಮ್ಮದ್ ಸಿರಾಜುದ್ದೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಮೂರ್ತಿ ಪ್ರದೀಪ್‌ಸಿಂಗ್ ಯೆರೂರು ಅವರು ಈ ಅರ್ಜಿ ವಿಚಾರಣೆ ತಾವು ಇರುವ ಪೀಠದಲ್ಲಿ ಬೇಡ ಎಂದು ಮನವಿ ಮಾಡಿದರು. ಸಿಜೆ ಅವರು ಈ ವಿಚಾರಣೆಗೆ ಬೇರೊಂದು ಪೀಠಕ್ಕೆ ರಚಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News