×
Ad

ಶರತ್ ಬಚ್ಚೇಗೌಡ ಇನ್ನೂ ಸಣ್ಣ ಹುಡುಗ: ಡಿಸಿಎಂ ಗೋವಿಂದ ಕಾರಜೋಳ

Update: 2019-11-23 20:23 IST

ಬೆಂಗಳೂರು, ನ.23: ಶರತ್ ಬಚ್ಚೇಗೌಡ ಇನ್ನೂ ಚಿಕ್ಕ ವಯಸ್ಸಿನ ಹುಡುಗ. ಅವರಿಗೆ ಅನುಭವದ ಕೊರತೆ ಇದೆ. ಆತುರಪಟ್ಟು ಈ ನಿರ್ಧಾರಕ್ಕೆ ಬಂದಿದ್ದು, ನಾವು ಅವರ ಮಾತನ್ನು ಪರಿಗಣಿಸಬೇಕಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರತ್ ಬಚ್ಚೇಗೌಡ ಚುನಾವಣೆಗೆ ನಿಲ್ಲಬಾರದಿತ್ತು, ಆದರೂ ನಿಂತಿದ್ದಾರೆ. ಜನ ಅವರಿಗೆ ಮನ್ನಣೆ ನೀಡಲ್ಲ ಎಂದರು.

ಸಂಸದ ಬಚ್ಚೇಗೌಡರು ಪುತ್ರ ವ್ಯಾಮೋಹ ತೋರಲ್ಲ. ಅವರಿಗೆ ಪಕ್ಷ ನಿಷ್ಠೆ ಇದೆ. ಪುತ್ರ ವ್ಯಾಮೋಹಕ್ಕೆ ಬಿದ್ದು ಪಕ್ಷಕ್ಕೆ ದ್ರೋಹ ಮಾಡಲ್ಲ. ಅವರಿಗೆ ಯಾವಾಗ ಚುನಾವಣಾ ಅಖಾಡಕ್ಕೆ ಇಳಿಯಬೇಕು ಎಂದು ಗೊತ್ತು. ಆಗ ಇಳಿದು ಎಂಟಿಬಿಯನ್ನೇ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಕೋಟೆಯಲ್ಲಿ ಅನೇಕ ಅಭಿವೃದ್ದಿಗಳನ್ನ ಎಂಟಿಬಿ ನಾಗರಾಜ್ ಮಾಡಿದ್ದಾರೆ ವಿನಃ ಕಾಂಗ್ರೆಸ್‌ನಿಂದಾಗಿ ಈ ಕ್ಷೇತ್ರದಲ್ಲಿ ಅಭಿವೃದ್ದಿಗಳು ಆಗಿಲ್ಲ. ಹೀಗಾಗಿ ಈ ಬಾರಿಯೂ ಮತದಾರರು ಎಂಟಿಬಿ ನಾಗರಾಜ್ ಅವರನ್ನೇ ಗೆಲ್ಲಿಸುತ್ತಾರೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News