×
Ad

ಪತ್ನಿಯ ಕೊಲೆ ಪ್ರಕರಣ: ಆರೋಪಿ ಪತಿ ಬಂಧನ

Update: 2019-11-23 23:37 IST

ಬೆಂಗಳೂರು, ನ.23: ಪತ್ನಿಯ ಮೇಲೆ ಹಲ್ಲೆ ನಡೆಸಿ, ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಪತಿಯನ್ನು ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮೀಲೇಔಟ್‌ನ ಜೆಸಿ ನಗರದ ರಾಕೇಶ್ ಕುಮಾರ್ ಗುಪ್ತಾ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ರಾಕೇಶ್ ಕುಮಾರ್ ಗುಪ್ತಾ ಮೂರು ವರ್ಷಗಳ ಹಿಂದೆ ರಾಧಾ ಅವರನ್ನು ವಿವಾಹವಾಗಿದ್ದು, ದಂಪತಿಗೆ 2 ವರ್ಷದ ಮಗುವಿದೆ. ಇತ್ತೀಚೆಗೆ ಪತಿ ಗುಪ್ತಾ ಬೇರೆ ಮಹಿಳೆ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ಅನುಮಾನ ಪಟ್ಟ ಪತ್ನಿ ರಾಧಾ, ಆತನ ಮೊಬೈಲ್ ಅನ್ನು ನೋಡಿದ್ದಾರೆ. ಇದೇ ವಿಚಾರವಾಗಿ ಜಗಳವುಂಟಾಗಿದೆ. ಇದರಿಂದ ಆಕ್ರೋಶಗೊಂಡ ಗುಪ್ತಾ, ರಾಧಾ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ, ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News