'ಪಾರ್ಲಿಮೆಂಟ್' ಸಿಗರೇಟ್ ನ ವಿಡಿಯೋ ವೈರಲ್
Update: 2019-11-25 23:19 IST
ಬೆಂಗಳೂರು, ನ.25: ಪಾರ್ಲಿಮೆಂಟ್(ಸಂಸತ್ತು) ಹೆಸರಿನಲ್ಲಿ ಅಕ್ರಮ ಸಿಗರೇಟ್‌ಗಳ ಮಾರಾಟದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣಾ ಪೊಲೀಸರು, ಆರೋಪಿಗಳ ಪತ್ತೆಗಾಗಿ ಮುಂದಾಗಿದ್ದಾರೆ.
ವಿದೇಶದಿಂದ ಅಕ್ರಮವಾಗಿ ಆಮದು ಮಾಡಿಕೊಂಡಿರುವ ತಂಬಾಕಿನಿಂದ ಸಿಗರೇಟ್ ತಯಾರಿಸಿ, ಸಾರ್ವಜನಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಖರೀದಿಸುವಂತೆ ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ ಎನ್ನಲಾಗಿದೆ.
ನಗರ ವ್ಯಾಪ್ತಿಯ ಕೋರಮಂಗಲ, ಜೆಪಿ ನಗರ ಸೇರಿದಂತೆ ಹಲವೆಡೆ ಈ ದಂಧೆ ಜೋರಾಗಿ ನಡೆಯುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ವಿಡಿಯೊ ಹರಿದಾಡುತ್ತಿದ್ದಂತೆ ವಕೀಲರೊಬ್ಬರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.