ಪಿಯುಸಿ ವಿದ್ಯಾರ್ಥಿಗಳ ದತ್ತಾಂಶ ಸೋರಿಕೆ ಕುರಿತು ತನಿಖೆಯಾಗಲಿ: ಎಸ್‌ಐಒ ಒತ್ತಾಯ

Update: 2019-11-28 17:58 GMT

ಬೆಂಗಳೂರು, ನ.28: ಪಿಯುಸಿ ವಿದ್ಯಾರ್ಥಿಗಳ ಖಾಸಗಿ ದತ್ತಾಂಶಗಳು ಸೋರಿಕೆಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕು ಮತ್ತು ತನಿಖೆಯ ನಂತರದ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಎಸ್‌ಐಒ ಒತ್ತಾಯಿಸಿದೆ.

ಸಿಇಟಿ ಮತ್ತು ನೀಟ್ ಪರೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿಗೆ ಸಂಬಂಧಿಸಿದಂತೆ ಮೊಬೈಲ್ ಸಂದೇಶಗಳು ಬರುತ್ತಿದ್ದು, ಉನ್ನತ ರ್ಯಾಂಕ್ ಮತ್ತು ಕಡಿಮೆ ರ್ಯಾಂಕ್ ಹೊಂದಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ಸಂಸ್ಥೆಗಳ ಮಧ್ಯವರ್ತಿಗಳು ಸಂದೇಶ ರವಾನಿಸುತ್ತಿದ್ದಾರೆ. ಪತ್ರಿಕಾ ವರದಿಯ ಪ್ರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ, ಕುಟುಂಬದ ಹಿನ್ನೆಲೆ, ಸಂಪರ್ಕ ಮಾಹಿತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಸ್ಥಾನಗಳ ಮಾಹಿತಿಗಳು ಸೋರಿಕೆಯಾದ ಬಗ್ಗೆ ತಿಳಿದು ಬಂದಿದೆ. ಈ ಕೃತ್ಯದ ಹಿಂದಿರುವ ಮಧ್ಯವರ್ತಿಗಳು, ಇದರಲ್ಲಿ ಪಾಲ್ಗೊಂಡಿರುವ ಸರಕಾರಿ ಅಧಿಕಾರಿಗಳ ಕೈವಾಡದ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕೆಂದು ಎಸ್‌ಐಒ ವಿದ್ಯಾರ್ಥಿ ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News