ನಿತ್ಯಾನಂದ ಆಶ್ರಮದ ಮೇಲೆ ಪೊಲೀಸರ ದಾಳಿ ?
ಬೆಂಗಳೂರು, ನ.30: ಗುಜರಾತ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಪ್ರಕರಣ ಸಂಬಂಧ ನಿತ್ಯಾನಂದ ಸ್ವಾಮೀಜಿ ಆಶ್ರಮದ ಮೇಲೆ ಗುಜರಾತ್ ಪೊಲೀಸರು ದಾಳಿ ನಡೆಸಿ, ಪರಿಶೀಲಿಸಿದರು ಎಂದು ತಿಳಿದುಬಂದಿದೆ.
ಇಲ್ಲಿನ ಬಿಡದಿಯ ಧ್ಯಾನಪೀಠ ಆಶ್ರಮದ ಮೇಲೆ ದಾಳಿ ನಡೆಸಿರುವ ಪೊಲೀಸರು, ಶೋಧ ನಡೆಸಿ, ನಿತ್ಯಾನಂದ ಸ್ವಾಮೀಜಿಯ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸರ್ಚ್ ವಾರೆಂಟ್ ಹಿನ್ನೆಲೆ ನಿತ್ಯಾನಂದ ಆಶ್ರಮಕ್ಕೆ ಗುಜರಾತ್ ಪೊಲೀಸರು ಆಗಮಿಸಿದ್ದರು. ಆದರೆ, ನಿತ್ಯಾನಂದ ಇಲ್ಲದ ಕಾರಣ, ಸ್ಥಳದಲ್ಲಿದ್ದ ಹತ್ತುಕ್ಕೂ ಹೆಚ್ಚಿನ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲೆಸಿಕೊಂಡು, ಪೊಲೀಸರು ವಾಪಸ್ಸು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನಾರ್ಧನ ಶರ್ಮ ಎಂಬುವವರು ತಮ್ಮ ಪುತ್ರಿಯ ವಿಚಾರವಾಗಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಿತ್ಯಾನಂದನ ಹುಡುಕಿಕೊಂಡು ಗುಜರಾತ್ ಪೊಲೀಸರು ಆಗಮಿಸಿದ್ದಾರೆ. ಇತ್ತೀಚಿಗಷ್ಟೇ, ಸಿಐಡಿ ಪೊಲೀಸರ ತಂಡವು ಬಿಡದಿಗೆ ಭೇಟಿ ನೀಡಿತ್ತು ಎನ್ನಲಾಗಿದೆ.