×
Ad

ಇನ್ನು ಮುಂದೆ ಹುಚ್ಚನ ರೀತಿ ಆಡಲ್ಲ, ನನ್ನನ್ನು ಕ್ಷಮಿಸಿ: ಹುಚ್ಚ ವೆಂಕಟ್

Update: 2019-11-30 21:16 IST
KPN

ಬೆಂಗಳೂರು, ನ.30: ಈ ಹಿಂದೆ ಹಲವು ತಪ್ಪುಗಳನ್ನು ತಿಳಿದೋ ತಿಳಿಯದೇನೋ ಮಾಡಿದ್ದೇನೆ, ಇನ್ನು ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜತೆಯೂ ಗಲಾಟೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಕ್ಷಮಿಸಿ ಎಂದು ಚಿತ್ರನಟ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ನನ್ನ ಹತ್ತಿರ ಬರೋದಕ್ಕೂ ಹೆದರುತ್ತಿದ್ದಾರೆ. ಹಾಗಾಗಿ ನನ್ನ ಮನಸ್ಸಿಗೆ ತುಂಬಾ ನೋವಾಗಿದ್ದು, ಯಾರೊಂದಿಗೂ ಗಲಾಟೆ ಮಾಡಿಕೊಳ್ಳುವುದಿಲ್ಲ. ಶೂಟಿಂಗ್ ವೇಳೆ ಕೆಲ ದುರ್ಘಟನೆಗಳು ನಡೆದಿದ್ದರಿಂದ ಈ ಹಿಂದೆ ಗಲಾಟೆ ಮಾಡಿದೆ. ಅಪ್ಪನ ದುಡ್ಡು ಹಾಳು ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಇನ್ನು ಮೇಲೆ ಸಂಪಾದನೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹೆದರುತ್ತಿದ್ದಾರೆ. ನನ್ನ ಬಳಿ ಬಂದರೆ ನಾನು ಹೊಡಿತೀನಿ ಅಂತ ಹೇಳುವದನ್ನು ಕೇಳಿಸಿಕೊಂಡಿದ್ದೇನೆ. ತಪ್ಪು ನೋಡಿದರೆ ಕೋಪ ಬರುತ್ತದೆ. ಈಗ ಯಾರ ಮೇಲೆಯೂ ಕೋಪವಿಲ್ಲ. ಬಿಗ್‌ಬಾಸ್ ಮನೆಗೆ ಪ್ರವೇಶ ನೀಡಿದರೆ ಗೆಸ್ಟ್ ಆಗಿ ಹೋಗಿ ಬರುತ್ತೇನೆ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದರೆ, ಸ್ಪರ್ಧಿಗಳಿಗೆಲ್ಲ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದರು.

ಸಿನಿಮಾ ಆಫರ್, ಅತಿಥಿ ಪಾತ್ರ, ಯಾವುದಾದರೂ ರಿಯಾಲಿಟಿ ಶೋ ಇದ್ದರೂ ಕೆಲಸ ಮಾಡುತ್ತೇನೆ. ಹಳೆಯ ಹುಚ್ಚ ವೆಂಕಟ್‌ನನ್ನು ಮರೆತು ಬಿಡಿ. ನಾನು ಬದಲಾಗಿದ್ದು, ಎಲ್ಲ ಘಟನೆಗಳು ನಡೆದಿದ್ದು ಆಕಸ್ಮಿಕ. ಸಿನಿಮಾ ಮಾಡೋದಕ್ಕೆ ಅಪ್ಪದುಡ್ಡು ಕೊಡುತ್ತೀನಿ ಅಂದಿದ್ದವರು ಕೊಡಲಿಲ್ಲ. ಹಾಗಾಗಿ ಇತ್ತೀಚೆಗೆ ನನ್ನ ಕಾರಿನ ಗ್ಲಾಸ್ ಒಡೆದಿದ್ದೇನೆ. ಯಾವುದೇ ಖಾಸಗಿ ಕಾರ್ಯಕ್ರಮ, ಮದುವೆಗಳಿಗೆ ಕರೆದರೂ ಬರುತ್ತೇನೆ. ನಾನು ಈಗ ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಫಿಟ್ ಆಗಿದ್ದೇನೆ. ಜನರ ಪ್ರೀತಿಗಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಮಾಜ ನನ್ನನ್ನು ಸ್ವೀಕರಿಸಿದರೆ, ಮತ್ತೆ ನಿಂತಿರುವ ಸಿನಿಮಾಗಳನ್ನು ಆರಂಭಿಸುತ್ತೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News