ಕತ್ತು ಹಿಸುಕಿ ಒಂಬತ್ತು ದಿನಗಳ ಹೆಣ್ಣು ಮಗುವಿನ ಹತ್ಯೆ
Update: 2019-11-30 21:57 IST
ಬೆಂಗಳೂರು, ನ.30: ಹೆಣ್ಣು ಮಗು ಜನಿಸಿತು ಎಂಬ ಕಾರಣಕ್ಕೆ ಒಂಭತ್ತೇ ದಿನಕ್ಕೆ ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಗರದ ತಮಿಳ್ ಸೆಲ್ವಿ ಎಂಬುವರು ಮಗುವನ್ನು ಕಳೆದುಕೊಂಡ ತಾಯಿ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ ತಮಿಳು ಸೆಲ್ವಿ ಅವರು ಮಗುವಿಗೆ ಹಾಲುಣಿಸಿ ಆಟವಾಡಿಸುತ್ತಿದ್ದರು. ಬಳಿಕ, ಅತ್ತೆ ಪರಮೇಶ್ವರಿ ಅವರ ಕೈಗೆ ನೀಡಿ, ಅಡುಗೆ ಮನೆಗೆ ಹೋಗಿದ್ದಾರೆ. ಅಷ್ಟರಲ್ಲಿಯೇ, ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮನೆಯ ಹಿಂಬದಿಯ ಜಾಗದಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ದೂರು ನೀಡಿರುವ ತಾಯಿ ತಮಿಳ್ ಸೆಲ್ವಿ ಅವರು, ಅತ್ತೆಯ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.ಮಗು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.