ಎಫ್‌ಎಸ್‌ಎಲ್‌ನಲ್ಲಿ ಸ್ಫೋಟ ಪ್ರಕರಣ: ಆಂತರಿಕ ತನಿಖೆಗಾಗಿ ತಜ್ಞರ ತಂಡ ರಚನೆ
Update: 2019-11-30 22:59 IST
ಬೆಂಗಳೂರು, ನ.30: ಇಲ್ಲಿನ ಮಡಿವಾಳದ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ನಡೆದ ಸ್ಫೋಟ ಪ್ರಕರಣ ಸಂಬಂಧ ಆಂತರಿಕ ತನಿಖೆಗಾಗಿ ತಜ್ಞರ ತಂಡ ರಚನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಸಾಯನಿಕ ವಸ್ತು(ಡಿಟೋನೇಟರ್) ಸ್ಫೋಟ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಕೋರಿ ಸಹಾಯಕ ನಿರ್ದೇಶಕರೊಬ್ಬರು ಠಾಣೆಗೆ ದೂರು ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸ್ಫೋಟ ಸಂಭವಿಸಿ, ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ರಾಯಚೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ್ದ ರಾಸಾಯನಿಕ ವಸ್ತುವನ್ನು ಪರೀಕ್ಷೆಗಾಗಿ ಈ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆ ವೇಳೆ ಈ ಅವಘಡ ಸಂಭವಿಸಿತ್ತು.