×
Ad

ನ್ಯಾಯಮೂರ್ತಿ ಭ್ರಷ್ಟ ಎಂದ ಅರ್ಜಿದಾರ: ಕೋರ್ಟ್ ಹಾಲ್‌ನಿಂದ ಹೊರಹಾಕಲು ಸೂಚಿಸಿದ ಹೈಕೋರ್ಟ್

Update: 2019-12-02 21:40 IST

ಬೆಂಗಳೂರು, ಡಿ.2: ಮೇಲ್ಮನವಿ ಅರ್ಜಿಯನ್ನು ನೀವು ಯಾಕೆ ವಜಾಗೊಳಿಸಿದಿರಿ ಎಂಬುದರ ಬಗ್ಗೆ ತನಗೆ ಸ್ಪಷ್ಟನೆ ನೀಡಬೇಕೆಂದು ಏರುಧ್ವನಿಯಲ್ಲಿ ಮಾತನಾಡಿದ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅರ್ಜಿದಾರನನ್ನು ಕೋರ್ಟ್ ಹಾಲ್‌ನಿಂದ ಹೊರಹಾಕಲು ಸೂಚಿಸಿತು. 

ನ್ಯಾಯಮೂರ್ತಿ ಅರವಿಂದಕುಮಾರ್ ಅವರು ಭ್ರಷ್ಟ ನ್ಯಾಯಮೂರ್ತಿಯಾಗಿದ್ದು, ಅವರು ನನ್ನ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅದೇ ರೀತಿಯಾಗಿ ನೀವೂ(ಸಿಜೆ) ವಜಾಗೊಳಿಸಿದ್ದಿರಿ. ತನಗೆ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದರು. ಸಿಜೆ ಅವರು ಹಾಗಾದರೆ ಮತ್ತೊಂದು ಬಾರಿ ಮೇಲ್ಮನವಿ ಸಲ್ಲಿಸಿ ಎಂದು ಸೂಚನೆ ನೀಡಿದರು. ಇದಕ್ಕೆ ಒಪ್ಪದ ಅರ್ಜಿದಾರರು ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಭ್ರಷ್ಟ ಎಂದು ಕೂಗಲು ಆರಂಭಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ನೀವಾಗಿ ನೀವೇ ಕೋರ್ಟ್ ಹಾಲ್‌ನಿಂದ ಆಚೆ ಹೋಗುವಿರಾ ಅಥವಾ ಪೊಲೀಸರನ್ನು ಕರೆಯಿಸಿ ನಿಮ್ಮನ್ನು ಹೊರಕಳುಹಿಸಬೇಕಾ ಎಂದು ಪ್ರಶ್ನಿಸಿತು. ಅಲ್ಲದೆ, ಪೊಲೀಸರೆ ಬಂದು ಅರ್ಜಿದಾರರಿಗೆ ಹೊರ ನಡೆಯುವಂತೆ ಹೇಳಿದಾಗ ಅರ್ಜಿದಾರರ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News