2020ರ ಐಪಿಎಲ್: ಹರಾಜು ಪ್ರಕ್ರಿಯೆಗೆ 971 ಆಟಗಾರರು ನೋಂದಣಿ

Update: 2019-12-03 05:54 GMT

 ಹೊಸದಿಲ್ಲಿ, ಡಿ.2: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(ಐಪಿಎಲ್) ಒಟ್ಟು 971 ಆಟಗಾರರು(713 ಭಾರತ, 258 ವಿದೇಶ) ಹೆಸರು ನೋಂದಾವಣೆ ಮಾಡಿದ್ದು,ಇದರಲ್ಲಿ ಅಮೆರಿಕದ ಓರ್ವ ಆಟಗಾರನೂ ಇದ್ದಾರೆ. ಹೆಸರು ನೋಂದಣಿಗೆ ನ.30 ಕೊನೆಯ ದಿನವಾಗಿತ್ತು.

2020ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಈ ಬಾರಿ ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿದೆ. ಖಾಲಿ ಇರುವ 73 ಸ್ಥಾನವನ್ನು ತುಂಬಲು 215 ಅನುಭವಿ ಆಟಗಾರರು, 754 ಹೊಸ ಆಟಗಾರರು ಹಾಗೂ ಅಸೋಸಿಯೇಟ್ ದೇಶದ ಇಬ್ಬರು ಲಭ್ಯವಿರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News