ನದಿ ನೀರು ಮಾರಾಟ ಮಾಡಲು ಮುಂದಾಗಿದೆ ಈ ರಾಜ್ಯ ಸರಕಾರ

Update: 2019-12-03 11:29 GMT
ಸಾಂದರ್ಭಿಕ ಚಿತ್ರ

ಶಿಮ್ಲಾ : ಯಮುನಾ ನದಿ ನೀರನ್ನು ಮಾರಾಟ ಮಾಡಲು ಒಪ್ಪಂದಕ್ಕೆ ಸಹಿ ಹಾಕಲು ಹಿಮಾಚಲ ಪ್ರದೇಶದ ಸಚಿವ ಸಂಪುಟ  ಸೋಮವಾರ ನಡೆದ ಸಭೆಯಲ್ಲಿ ಅನುಮೋದನೆ ನೀಡಿದೆ.

ತಾಜೆವಾಲ ಕಾರಿಡಾರಿನಲ್ಲಿ ರಾಜ್ಯದ ಪಾಲಿನ ಯಮುನಾ ನದಿ ನೀರನ್ನು ಮಾರಾಟ ಮಾಡಲಾಗುವುದೆಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ ರಾಜ್ಯ ಸರಕಾರ ವಾರ್ಷಿಕ 21 ಕೋಟಿ ರೂ. ಆದಾಯ ಗಳಿಸಲಿದೆ.

ನದಿ ನೀರನ್ನು ಯಾರಿಗೆ ಮಾರಾಟ ಮಾಡಲಾಗುವುದು ಹಾಗೂ ಯಾವ ಸಂಸ್ಥೆ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News