ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಮನವಿ

Update: 2019-12-03 17:40 GMT

ಬೆಂಗಳೂರು, ಡಿ.3: ರಾಜ್ಯದ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಪಂಗಡಕ್ಕೆ ಶೇಕಡ 9ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕೆಂದು ಎಲ್.ಜಿ.ಹಾವನೂರು ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲು ಪ್ರಮಾಣ ಹೆಚ್ಚಳದ ಪರಿಶೀಲನೆಗಾಗಿ ನ್ಯಾ.ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗದ ಜೊತೆ ಚರ್ಚೆ ನಡೆಸಿದ ಸಮಿತಿ ಸದಸ್ಯರು, ರಾಜಕೀಯ, ಆರ್ಥಿಕ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹುಚ್ಚವನಹಳ್ಳಿ ಮಂಜುನಾಥ, 2011ರ ಜನಗಣತಿ ಪ್ರಕಾರ ಮೀಸಲಾತಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಲ್ಲಿಸಿ, ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.

2011 ಸಾಲಿನ ಜನಸಂಖ್ಯೆ ಗಣತಿ ಆಧಾರದ ಮೇಲೆಯೇ ಪರಿಶಿಷ್ಟ ಪಂಗಡಕ್ಕೆ ಶೇಕಡ 9 ರಷ್ಟಿನ ಮೀಸಲಾತಿ ಕಲ್ಪಿಸಬೇಕು. ಇದರಿಂದ ಜನಾಂಗ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಹಕಾರ ಆಗಲಿದೆ ಎಂದು ತಿಳಿಸಿದರು.

ಈ ವೇಳೆ ಚಾಮರಾಜನಗರ ರಾಮಚಂದ್ರಪ್ಪ, ವಕೀಲ ಅನಂತ್ ನಾಯ್ಕ, ತ್ಯಾವಣಿಗೆ ಕುಬೇರ, ಆಲೂರು ಪರುಶರಾಮ್, ಯಲೋದಹಳ್ಳಿ ರವಿಕುಮಾರ್, ಗುಮ್ಮನೂರು ಬಸವರಾಜು, ಹೂವಿನಮಡು ನಾಗರಾಜು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News